FILM
ವೈರಲ್ ಆದ ಪ್ರಜ್ವಲ್ ರೇವಣ್ಣ ವಿರುದ್ದ ತೆಲುಗು ನಟಿ ರಶ್ಮಿ ಗೌತಮ್ ಇನ್ಸ್ಟಾಗ್ರಾಂ ಸ್ಟೇಟಸ್

ಬೆಂಗಳೂರು, ಮೇ.1: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡೀ ದೇಶದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಸಿನೆಮಾ ಮಂದಿ ಕೂಡ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈಗಾಗಲೇ ಪ್ರಜ್ವಲ್ ರೇವಣ್ಣ ವಿರುದ್ದ ನಟಿ ಪೂನಂ ಕೌರ್ ಅವರು ಈ ಬಗ್ಗೆ ಅಕ್ರೋಶ ವ್ಯಕ್ತಪಡಿಸಿದರು. ಇದೀಗ ತೆಲುಗು ನಟಿ ರಶ್ಮಿ ಗೌತಮ್ ವಿರೋಧ ವ್ಯಕ್ತಪಡಿಸಿದ್ದಾರೆ. ತೆಲುಗು ನಟಿ ಹಾಗೂ ನಿರೂಪಕಿ ರಶ್ಮಿ ಗೌತಮ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್ ಒಂದು ಹಾಕಿಕೊಂಡಿದ್ದಾರೆ. “ಮಹಿಳೆ ಹಸಿದಾಗ ಬಾಯಿಗೆ ಅನ್ನ ಕೊಡಿ, ಅದನ್ನಲ್ಲ” ಎಂದು ಖ್ಯಾತ ಬ್ರಿಟನ್ ಲೇಖಕಿ ರಾಷೆಲ್ ಮೊರಾನ್ ಅವರ ಸಂದೇಶವನ್ನು ಹಂಚಿಕೊಂಡಿದ್ದಾರೆ. ಇದೀಗ ಈ ವಿಚಾರ ಎಲ್ಲ ಕಡೆ ಚರ್ಚೆಗೆ ಕಾರಣವಾಗಿದೆ.
