Connect with us

    KARNATAKA

    ಇಡೀ ರಾಜ್ಯವೇ ಖುಷಿ ಪಡೋ ಸುದ್ದಿಕೊಟ್ಟಿದ್ದ ಆ್ಯಂಕರ್ ದಿವ್ಯಾ ವಸಂತ್ ಕೇರಳದಲ್ಲಿ ಅರೆಸ್ಟ್

    ಬೆಂಗಳೂರು ಜುಲೈ 11: ಸುಲಿಗೆ ಬ್ಲ್ಯಾಕ್ ಮೇಲ್ ಪ್ರಕರಣದಲ್ಲಿ ಆರೋಪಿಯಾಗಿ ತಲೆಮರೆಸಿಕೊಂಡಿದ್ದ ನಿರೂಪಕಿ ದಿವ್ಯ ವಸಂತ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.


    ದಿವ್ಯ ವಸಂತ ಮತ್ತು ಗ್ಯಾಂಗ್ ನಿಂದ ಇಂದಿರಾನಗರದಲ್ಲಿರುವ ಸ್ಪಾ ಮಾಲೀಕನಿಗೆ ಬೆದರಿಕೆ ಹಾಕಿ ಹಣ ಸುಲಿಗೆ ಯತ್ನ ಪ್ರಕರಣ ಇದಾಗಿದ್ದು, ಈ ಕೇಸ್‌ ನಲ್ಲಿ ತಮ್ಮನ ಬಂಧನ ನಂತರ ಪರಾರಿಯಾಗಿ ತಲೆಮರೆಸಿಕೊಂಡಿದ್ದ ದಿವ್ಯ ವಸಂತ ಕೇರಳದಲ್ಲಿ ಇರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು.

    ಒಂದು ವಾರದಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ದಿವ್ಯ ತಮಿಳುನಾಡಿನಿಂದ ಕೇರಳದಲ್ಲಿ ತಲೆ ಮರೆಸಿಕೊಂಡಿದ್ದಳು. ಸದ್ಯ ಕೇರಳದಿಂದ ಬಂಧಿಸಿ ಕರೆತಂದಿರುವ ಜೀವನ್ ಭೀಮಾನಗರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply