DAKSHINA KANNADA
ನಾನು ಹಿಂದು,ಹಿಂದುತ್ವ ನನಗೆ ಬೇಕಿಲ್ಲ ಎನ್ನುವ ಕಮಂಗಿಗಳನ್ನು ಹಿಂದೂ ಎಂದು ಒಪ್ಪಲು ಸಾಧ್ಯವಿಲ್ಲ…!!

ಪುತ್ತೂರು ಜನವರಿ 12: ದೇಶದಲ್ಲಿ ಇಂದು ಕೆಲವರು ಹಿಂದುತ್ವದ ಬಗ್ಗೆ ಚರ್ಚೆ ನಡೆಸುತ್ತಾರೆ, ನಾನು ಹಿಂದೂ ಆದರೆ ನನಗೆ ಹಿಂದುತ್ವ ಬೇಕಿಲ್ಲ ಎನ್ನುವ ಕಮಂಗಿಗಳಿಗೆ ಹಿಂದುತ್ವದ ಭವ್ಯ ಬದುಕಿನ ಮೇಲೆ ನಂಬಿಕೆಯಿಲ್ಲ ಎಂದು ಉತ್ತರಕನ್ನಡ ಸಂಸದ ಅನಂತಕುಮಾರ್ ಹೆಗ್ಡೆ ಹೇಳಿದರು.
ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ನಡೆದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಮಾಜಿ ಸಿಎಂ ಸಿದ್ಧರಾಮಯ್ಯರ ವಿರುದ್ಧ ಪರೋಕ್ಷ ದಾಳಿ ನಡೆಸಿದ ಅವರು ಹಿಂದುತ್ವದ ಬಗ್ಗೆ ಮಾತನಾಡುವ ಆ ಮನುಷ್ಯನಿಗೆ ಅವನ ರಕ್ತದ ಬಗ್ಗೆಯೇ ಗೊತ್ತಿಲ್ಲ. ಅಂತವ ಹಿಂದುತ್ವವೇ ಬೇಡ ಎನ್ನುವ ಮಾತನಾಡುತ್ತಾನೆ. ನಿನಗೆ ಬೇಕೋ,ಬೇಡವೋ ಎನ್ನುವುದನ್ನು ಯಾರು ಕೇಳಿದ್ದಾರೆ. ನಿನಗೆ ಹಿಂದುತ್ವ ಇಲ್ಲ ಅನ್ನೋದನ್ನ ನಾವೆಲ್ಲಾ ಪರಿಗಣಿಸಿ ಬಿಟ್ಟಾಗಿದೆ. ಅಂಥವರಿಂದ ನಮಗೆ ಹಿಂದುತ್ವದ ಪಾಠ ಬೇಕಾಗಿಲ್ಲ ಎಂದ ಅವರು ಜಾತಿಯ ಗೂಡನ್ನು ಬಿಟ್ಡು ಹೊರಗೆ ಬರದವರು ಹಿಂದುತ್ವದ ಬಗ್ಗೆ ಮಾತನಾಡುತ್ತಾರೆ, ಸರಿಯಾಗಿ ಎರಡು ಪುಸ್ತಕವಿಟ್ಟರೆ ಅದನ್ನ ಓದುವ ಯೋಗ್ಯತೆ ಇಲ್ಲದವರು ಹಿಂದುತ್ವದ ಮಾತನಾಡುತ್ತಾರೆ.

ದೇವಸ್ಥಾನಕ್ಕೆ ಹೇಗೆ ಹೋಗಬೇಕು ಎನ್ನುವ ಪರಿಜ್ಞಾನವಿಲ್ಲದವರು ಹಿಂದುತ್ವದ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.ಯಾರಿಗೆ ಹಿಂದುತ್ವದ ಭವ್ಯ ಬದುಕಿನ ಮೇಲೆ ನಂಬಿಕೆಯಿಲ್ಲವೋ ಅಂತವರು ಹಿಂದೂ ಆಗಿರಲು ಸಾಧ್ಯವಿಲ್ಲ. ವಿವೇಕಾನಂದರು ಹಿಂದುತ್ವದ ಇದೇ ಭವ್ಯ ಬದುಕಿನಲ್ಲಿ ನಡೆದವರು ಎಂದರು.