DAKSHINA KANNADA
ಕನ್ನಡದ ಬಗ್ಗೆ ಹೋರಾಟ ಮಾಡುವ ನಮಗೇ ಸರಿಯಾಗಿ ಕನ್ನಡ ಬರೆಯುವಂತಹ ಯೋಗ್ಯತೆಯಿಲ್ಲ- ಅನಂತ್ ಕುಮಾರ್ ಹೆಗಡೆ

ಕನ್ನಡದ ಬಗ್ಗೆ ಹೋರಾಟ ಮಾಡುವ ನಮಗೇ ಸರಿಯಾಗಿ ಕನ್ನಡ ಬರೆಯುವಂತಹ ಯೋಗ್ಯತೆಯಿಲ್ಲ- ಅನಂತ್ ಕುಮಾರ್ ಹೆಗಡೆ
ಪುತ್ತೂರು, ಫೆಬ್ರವರಿ 17: ಇಂಗ್ಲಿಷ್, ಇಂಗ್ಲಿಷ್ ಎಂದು ಹೋರಾಟ ಮಾಡುವ, ಒದರುವ ನಾವು ಸರಿಯಾಗಿ ಕನ್ನಡದಲ್ಲಿ ಸರಿಯಾಗಿ ಬರೆಯುವ ಯೋಗ್ಯತೆಯನ್ನು ಕಳೆದುಕೊಂಡಿದ್ದೇವೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿದರು.
ಪುತ್ತೂರಿನ ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ನಡೆದ ಕೌಶಲ್ಯಾಭಿವೃದ್ಧಿ ತರಭೇತಿ ಕಾರ್ಯಕ್ರಮವನ್ನು ಉದ್ಧೇಶಿಸಿ ಅವರು ಮಾತನಾಡಿದರು. ಇಂಗ್ಲಿಷ್ ಹಾವಳಿ ಹೆಚ್ಚುತ್ತಿದೆ ಎನ್ನುವ ಹೋರಾಟಗಳು ನಿರಂತರವಾಗಿ ನಡೆಯುತ್ತಿದೆ.

ಆದರೆ ಹೀಗೆ ಹೋರಾಟ ಮಾಡುವ, ಒದರುವ ನಾವೇ ಸರಿಯಾಗಿ ಕನ್ನಡ ಬರೆಯುವ ಯೋಗ್ಯತೆಯನ್ನು ಕಳೆದುಕೊಂಡಿದ್ದೇವೆ ಎಂದ ಅವರು ಇಂದು ಕನ್ನಡವನ್ನು ಇಂಗ್ಲಿಷ್ ಗೆ ತರ್ಜುಮೆ ಮಾಡುವ ಬದಲು ಇಂಗ್ಲಿಷ್ ಅನ್ನು ಕನ್ನಡಕ್ಕೆ ತರ್ಜುಮೆ ಮಾಡುವಂತಹ ಸ್ಥಿತಿ ನಿರ್ಮಾಣಗೊಂಡಿದೆ.
ಈ ಕೆಲಸವನ್ನು ಕೇವಲ ದಕ್ಷಿಣಕನ್ನಡ, ಶಿವಮೊಗ್ಗ ಹಾಗೂ ಉತ್ತರ ಕನ್ನಡದಂತಹ ಹಳ್ಳಿ ಶಾಲೆಗಳಲ್ಲಿ ಕನ್ನಡ ಮೀಡಿಯಂ ನಲ್ಲಿ ಓದಿದವರು ಮಾತ್ರ ಸರಿಯಾಗಿ ಮಾಡಬಲ್ಲರು ವಿನಹ ಉಳಿದವರಿಗೆ ಈ ಯೋಗ್ಯತೆಯೇ ಇಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಶುದ್ಧ ಕನ್ನಡ ಮಾತನಾಡುವುದಕ್ಕೆ ಇಂದು ಅವಕಾಶವೇ ಇಲ್ಲದಂತಾಗಿದ್ದು, ಶುದ್ಧ ಕನ್ನಡದಲ್ಲಿ ಮಾತನಾಡಿದಲ್ಲಿ ಅನೇಕರಿಗೆ ಅರ್ಥವೇ ಆಗುವುದು ಕಷ್ಟ.
ಅದರಲ್ಲೂ ಬೆಂಗಳೂರಿನಲ್ಲಂತೂ ಅರ್ಥವೇ ಆಗುವುದೇ ಇಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.