FILM
ದಿವ್ಯಾಂಗ ಮಕ್ಕಳ ಜೊತೆ ಹುಟ್ಟುಹಬ್ಬ ಆಚರಿಸಿದ ಕನ್ನಡದ ಹಿರಿಯ ನಟ ಅನಂತನಾಗ್
ಮಂಗಳೂರು ಸೆಪ್ಟೆಂಬರ್ 04: 75 ಸಂವತ್ಸವರ ಮುಗಿಸಿರುವ ಕನ್ನಡದ ಮೇರು ನಟ ಅನಂತ್ ನಾಗ್ ಅವರು ಇಂದು ಮಂಗಳೂರಿನಲ್ಲಿ ದಿವ್ಯಾಂಗ ಮಕ್ಕಳ ಜೊತೆ ತಮ್ಮ ಹುಟ್ಟುಹಬ್ಬ ಆಚರಿಸಿ ಸಂಭ್ರಮಿಸಿದರು.
ಕದ್ರಿ ಶಿವಭಾಗ್ ನಲ್ಲಿರುವ ಅನಿರ್ವೇದ ಫೌಂಡೇಶನ್ ನಲ್ಲಿ ವಿಶೇಷ ಚೇತನ ಮಕ್ಕಳ ಜೊತೆಗೂಡಿ ತಮ್ಮ 75 ನೇ ಜನ್ಮದಿನವನ್ನು ಆಚರಿಸಿದರು. ಮಕ್ಕಳೊಂದಿಗೆ ಕೇಕ್ ಕಟ್ ಮಾಡಿ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ಅನಂತನಾಗ್ ಅವರು ಮಕ್ಕಳಲ್ಲಿಯೇ ದೇವರನ್ನು ಕಾಣಬೇಕೆಂಬ ಉದಾತ್ತ ಚಿಂತನೆಯನ್ನು ಆನಂದಾಶ್ರಮದಲ್ಲಿ ತಮ್ಮ ಗುರುಗಳು ಹೇಳಿಕೊಟ್ಟಿದ್ದರು. ಇಂತಹ ದಿವ್ಯಾಂಗ ಮಕ್ಕಳಿಗೆ ದಾರಿದೀಪವಾಗಿರುವ ಸಂಸ್ಥೆಯ ಮುಖ್ಯಸ್ಥರಾದ ಡಾ. ಶ್ವೇತಾ ಅವರು ಮಕ್ಕಳ ಬಾಳಿನಲ್ಲಿ ದೇವರ ರೂಪವಾಗಿ ಬಂದಿದ್ದೀರಿ. ನಿಮ್ಮ ಸೇವೆ ಇನ್ನಷ್ಟು ದಿವ್ಯ ಚೇತನ ಮಕ್ಕಳಲ್ಲಿ ಬೆಳಕಾಗಿ ಬರಲಿ. ಈ ಸಂಸ್ಥೆಯ ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು.
ಡಾ. ಶ್ವೇತ ಅವರು ಸಂಸ್ಥೆಯ ಬೆಳವಣಿಗೆಗೆ ಸಹಕರಿಸಿದ ಎಲ್ಲರನ್ನು ವಂದಿಸಿದರು. ಕಾರ್ಪೋರೇಟರ್ ನವೀನ್ ಡಿಸೋಜಾ ಪಾಲಿಕೆ ಮತ್ತು ವೈಯಕ್ತಿಕವಾಗಿ ಸಂಸ್ಥೆಗೆ ಅಗತ್ಯ ನೆರವನ್ನು ನೀಡಲು ಬದ್ಧ ಎಂದು ತಿಳಿಸಿದರು.ಡಾ. ರವಿಚಂದ್ರ ಶುಭ ಹಾರೈಸಿದರು. ಅನಂತನಾಗ್ ಪತ್ನಿ ಗಾಯತ್ರಿ ನಾಗ್, ಮಗಳು ಅದಿತಿ, ಅಳಿಯ ವಿವೇಕ್, ಆತ್ಮೀಯರಾದ ಮಂಗಲ್ಪಾಡಿ ನರೇಶ್ ಶೆಣೈ, ಅಂಜನಾ ಕಾಮತ್ ಹಾಗೂ ಸಂಸ್ಥೆಯ ಮಕ್ಕಳ ಪೋಷಕರು, ಹಿತೈಷಿಗಳು ಉಪಸ್ಥಿತರಿದ್ದರು.