Connect with us

    DAKSHINA KANNADA

    ಪುತ್ತೂರು ಶಾರದಾ ಮಂದಿರಲ್ಲಿ ಈ ಬಾರಿ ನವರಾತ್ರಿ ಪ್ರಯುಕ್ತ ನಡೆಯಲಿದೆ ವಿನೂತನ ‘ಅಕ್ಷರಯಜ್ಞ’ ಸೇವೆ..!

    ಪುತ್ತೂರು : ಶ್ರೀ ದೇವಿಯ ಆರಾಧನೆಯ ನವರಾತ್ರಿ ಉತ್ಸವ ಆರಂಭಗೊಂಡಿದ್ದು, ಎಲ್ಲಾ ದೇವಿ ದೇವಸ್ಥಾನಗಳಲ್ಲಿ ನವದುರ್ಗೆಗೆ ವಿಶೇಷ ಪೂಜೆ-ಪುನಸ್ಕಾರಗಳು ನಡೆಯಲು ಆರಂಭಿಸಿದೆ. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಗತಕಾಲದ ಶ್ರೀ ಶಾರದಾ ಭಜನಾ ಮಂದಿರದಲ್ಲಿ ಕಳೆದ 90 ವರ್ಷಗಳಿಂದೀಚೆಗೆ ಶಾರದೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ಈ ಭಜನಾ ಮಂದಿರದಲ್ಲಿ ಭಕ್ತರು ಶಾರದಾ ಮಾತೆಯನ್ನು ಅಕ್ಷರದ ಜೊತೆಗೆ ಆರಾಧನೆ ಮಾಡುವ ವಿಶಿಷ್ಟ ಸೇವೆಯನ್ನು ಆರಂಭಿಸಿದೆ. ಅಕ್ಷರಯಜ್ಞ ಹೆಸರಿನಲ್ಲಿ ಈ ಸೇವೆ ನಡೆಸಲು ಉದ್ಧೇಶಿಸಲಾಗಿದೆ.

    ವಿದ್ಯಾದಾಯಿನಿ ಶಾರದೆಯನ್ನು ಒಲಿಸಿಕೊಂಡರೆ ಮಾತ್ರವೇ ವಿದ್ಯಾ-ಬುದ್ಧಿಯನ್ನು ದೇವಿ ದಯಪಾಲಿಸುತ್ತಾಳೆ. ನವರಾತ್ರಿಯ ಒಂಬತ್ತು ದಿನಗಳು ದೇವಿಯ ಆರಾಧನೆಗೆ ಸುದಿನವಾಗಿದ್ದು, ಎಲ್ಲಾ ಕಡೆಗಳಲ್ಲೂ ವಿಶಿಷ್ಡ ರೀತಿಯಲ್ಲಿ‌ ದೇವಿಯ ಆರಾಧನೆಗಳು ನಡೆಯುತ್ತವೆ. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಅತ್ಯಂತ ಪುರಾತನ ಮಂದಿರವಾದ ಶಾರದಾ ಮಂದಿರದಲ್ಲಿ ಕಳೆದ 90 ವರ್ಷಗಳಿಂದ ಶಾರದೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತದೆ. ಇತಿಹಾಸ ಪ್ರಸಿದ್ಧ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಇರುವ ಈ ಮಂದಿರದ ಸ್ಥಾಪನೆಯ ಬಗ್ಗೆ ನಿಖರವಾದ ಮಾಹಿತಿ ಲಭ್ಯವಿಲ್ಲ. ಆದರೆ ಇಲ್ಲಿ ಕಳೆದ 90 ವರ್ಷಗಳಿಂದ ಶಾರದೋತ್ಸವವನ್ನು ಧಾರ್ಮಿಕ ವಿಧಿವಿಧಾನಗಳಡಿ ಆಚರಿಸಿಕೊಂಡು‌ ಬರಲಾಗುತ್ತಿದೆ. ಈ‌ ಬಾರಿ ದೇವಿ ಮತ್ತು ಭಕ್ತರನ್ನು ಇನ್ನಷ್ಟು ಹತ್ತಿರ‌ ತರಬೇಕು ಎನ್ನುವ ದೃಷ್ಟಿಕೋನದಲ್ಲಿ ಅಕ್ಷರಯಜ್ಞ ಎನ್ನುವ ಸೇವೆಯನ್ನು ಇಲ್ಲಿ ಆರಂಭಿಸಲಾಗಿದೆ.

    ವಿದ್ಯಾದೇವಿಯಾದ ಶಾರದೆಯನ್ನು ಅಕ್ಷರದ ಮೂಲಕವೇ ಆರಾಧನೆ ಮಾಡುವುದೇ ಈ ಅಕ್ಷರಯಜ್ಞ. ನವರಾತ್ರಿ ಆರಂಭದ ದಿನ ಮಂದಿರಕ್ಕೆ ಭೇಟಿ ನೀಡುವ ಎಲ್ಲಾ ಭಕ್ತರಿಗೆ ಪುಸ್ತಕವೊಂದನ್ನು ಕೊಡಲಾಗುತ್ತದೆ. ಪ್ರತೀ ಮನೆಗೆ ಈ‌ ಪುಸ್ತಕವನ್ನು ತಲುಪಿಸುವ ಉದ್ಧೇಶವಿದ್ದು, ಮನೆಯ ಪ್ರತಿಯೊಬ್ಬ ಸದಸ್ಯ ಈ ಪುಸ್ತಕರದಲ್ಲಿ ” ಓಂ ಶಾರದಾಯೇ ನಮಹ ” ಎಂದು 108 ಸಲ ಬರೆಯಬೇಕು. ಬರೆದ ಪುಸ್ತಕವನ್ನು ಅಕ್ಟೋಬರ್ 8 ರಂದು ಮತ್ತೆ ಮಂದಿರಕ್ಕೆ ತಂದು ಮುಟ್ಟಿಸಬೇಕು. ಅಕ್ಟೋಬರ್ 9 ರಂದು ಮಂದಿರದಲ್ಲಿ ಶಾರದಾ ದೇವಿಯ ವಿಗ್ರಹದ ಪ್ರತಿಷ್ಠಾಪನೆ ನಡೆಯಲಿದ್ದು, ಈ ಸಂದರ್ಭದಲ್ಲಿ ದೇವಿಗೆ ಸರಸ್ವತಿ ಪೂಜೆ ನೆರವೇರಿಸಲಾಗುತ್ತದೆ.

    ಈ ಪೂಕೆಯ ಸಂದರ್ಭದಲ್ಲಿ ಪ್ರತಿ ಮನೆಯಿಂದ ಸಂಗ್ರಹಿಸಿದ ಪುಸ್ತಕವನ್ನು ದೇವಿಯ ಮುಂದಿಟ್ಡು ಪೂಜಿಸಲಾಗುತ್ತದೆ. ಹೀಗೆ ಪೂಜಿಸಿದ ಪುಸ್ತಕವನ್ನು ಮತ್ತೆ ಆಯಾಯ ಮನೆಗಳಿಗೆ ನೀಡಲಾಗಿತ್ತದೆ. ಪೂಜಿಸಲ್ಪಟ್ಟ ಈ ಪುಸ್ತಕವನ್ನು ದೇವರ ಕೋಣೆಯಲ್ಲಿಟ್ಟರೆ ವಿಧ್ಯೆಗೆ ಉತ್ತಮ ಎನ್ನುವುದು ಈ ಸೇವೆಯ ಹಿಂದಿರುವ ಉದ್ಧೇಶವಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply