KARNATAKA
ಉತ್ತರಕನ್ನಡದಲ್ಲೂಕಾಡಾನೆ ಹಾವಳಿ,ದನ ಮೇಯಿಸಲು ಕಾಡಿಗೆ ಹೋಗಿದ್ದ ವ್ಯಕ್ತಿ ಮೇಲೆ ಆನೆ ದಾಳಿ..!

ಕಾರವಾರ : ದಕ್ಷಿಣ ಕನ್ನಡದಲ್ಲಿ ಮಾತ್ರ ಇದ್ದ ಕಾಡಾನೆ ಹಾವಳಿ ಇದೀಗ ಉತ್ತರ ಕನ್ನಡ ಜಿಲ್ಲೆಯಲ್ಲೂ ಆರಂಭವಾಗಿದ್ದು ದಾಂಡೇಲಿ ಅರಣ್ಯ ಪ್ರದೇಶದಲ್ಲಿ ವ್ಯಕ್ತಿ ಮೇಲೆ ಕಾಡಾನೆ ದಾಳಿ ಮಾಡಿದೆ.
ದಾಂಡೇಲಿ ನಾನಾಕೆಸರೋಡಾ ಎಂಬ ಗ್ರಾಮದ ಹತ್ತಿರ ಜಾನುವಾರು ಮೇಯಿಸಲು ಕಾಡಿಗೆ ಹೋಗಿದ್ದ ವೇಳೆ ವ್ಯಕ್ತಿಯ ಮೇಲೆ ಆನೆ ದಾಳಿ ಮಾಡಿದೆ.ಮಹೇಶ ಜಾನು ಪಾಟೀಲ್ ಎಂಬುವವರ ಮೇಲೆ ಈ ದಾಳಿ ನಡೆದಿದ್ದು ಗಾಯಗೊಂಡ ಆತನನ್ನು ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಅಪಾಯದಿಂದ ಪಾರಾಗಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
