FILM
ತಾಯಿಯಾಗುತ್ತಿರುವ ಚೆಲುವಿನ ಚಿತ್ತಾರದ ನಟಿ ಅಮೂಲ್ಯ
ಬೆಂಗಳೂರು: ಚೆಲುವಿನ ಚಿತ್ತಾರದ ನಟಿ ಅಮೂಲ್ಯ ಜಗದೀಶ್ ಇದೀಗ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಅವರು ಪತಿ ಜಗದೀಶ್ ಜೊತೆ ಇರುವ ಒಂದು ವಿಶೇಷ ಫೋಟೋವನ್ನು ಹಂಚಿಕೊಂಡು ‘ಸದ್ಯ ನಾವು ಈಗ ಇಬ್ಬರಲ್ಲ. 2022ರಲ್ಲಿ ಮೂವರಾಗುತ್ತಿದ್ದೇವೆ’ ಎಂದು ಬರೆದುಕೊಂಡಿದ್ದಾರೆ.
ಬಾಲನಟಿಯಾಗಿಯೇ ಚಿತ್ರರಂಗಕ್ಕೆ ಕಾಲಿಟ್ಟ ಅಮೂಲ್ಯ ಅವರು ‘ಚೆಲುವಿನ ಚಿತ್ತಾರ’ ಸಿನಿಮಾ ಮೂಲಕ ಹೀರೋಯಿನ್ ಆಗಿ ಚಿರಪರಿಚಿತರಾದರು. ಇತ್ತ ಚಿತ್ರರಂಗದಲ್ಲಿ ಬೇಡಿಕೆ ಇರುವಾಗಲೇ 2017ರಲ್ಲಿ ರಾಜಕೀಯ ಹಿನ್ನೆಲೆ ಇರುವ ಕುಟುಂಬದ ಜಗದೀಶ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಸದ್ಯ ಈ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.