LATEST NEWS
ಅಂಫಾನ್ ಚಂಡಮಾರುತ: ಕರಾವಳಿ ಎಡೆಬಿಡದೇ ಸುರಿಯುತ್ತಿರುವ ಭಾರಿ ಮಳೆ
ಅಂಫಾನ್ ಚಂಡಮಾರುತ: ಕರಾವಳಿ ಎಡೆಬಿಡದೇ ಸುರಿಯುತ್ತಿರುವ ಭಾರಿ ಮಳೆ
ಮಂಗಳೂರು, ಮೇ 18 : ಅಂಫಾನ್ ಚಂಡಮಾರುತದಿಂದಾಗಿ ಕರಾವಳಿಯಾದ್ಯಂತ ಭಾರಿ ಮಳೆ ಸುರಿಯುತ್ತಿದೆ. ನಿನ್ನೆ ಸಂಜೆಯಿಂದಲೆ ಪ್ರಾರಂಭವಾದ ಗುಡುಗು ಸಿಡಿಯಲು ಸಹಿತ ಭಾರಿ ಮಳೆ ಇಂದು ಕೂಡ ಮುಂದುವರೆದಿದೆ.
ಅಂಫಾನ್ ಚಂಡಮಾರುತವೂ ಮೇ 18ರಂದು ತೀವ್ರ ಸ್ವರೂಪ ಪಡೆಯಲಿದ್ದು ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ ಭಾಗದಲ್ಲಿ ಮುಂದಿನ ಮೂರು ದಿನಗಳಲ್ಲಿ ಕರಾವಳಿಯಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದ್ದು ಈ ಕಾರಣಕ್ಕಾಗಿ ಭಾರತೀಯ ಹವಾಮಾನ ಇಲಾಖೆ ಕರಾವಳಿಯಲ್ಲಿ “ಯಲ್ಲೋ ಅಲರ್ಟ್” ಘೋಷಿಸಿದೆ
ಮುಂದಿನ ಮೂರು ದಿನಗಳ ಕಾಲ ರಾವಳಿ ಭಾಗದಲ್ಲಿ 64.5 ಮೀಮೀ ನಿಂದ 115.5 ಮಿ.ಮೀ ವರೆಗೆ ಮಳೆಯಾಗುವ ಸಾಧ್ಯತೆ ಇದ್ದು, ಗುಡುಗು ಸಿಡಿಲಿನೊಂದಿಗೆ ಗಾಳಿ ಕೂಡಾ ಹೆಚ್ಚಾಗಿ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬಂಗಾಳ ಕೊಲ್ಲಿಯಲ್ಲಿ ಅಂಫಾನ್ ಚಂಡಮಾರುತ ಎದ್ದಿರುವ ಕಾರಣ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಡಳಿತ ಈಗಾಗಲೇ ಸೂಚನೆ ನೀಡಿದೆ.
ಜಿಲ್ಲೆಯಲ್ಲಿ ಮುಂಜಾನೆಯಿಂದ ಸುರಿದ ಭಾರಿ ಮಳೆಗೆ ಮಂಗಳೂರು ನಗರದ ಹಲವೆಡೆ ಕೃತಕ ನೆರೆ ಉಂಟಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ನಗರದ ಕೊಟ್ಟಾರ, ಮೇರಿಹಿಲ್ ಸೇರಿದಂತೆ ತಗ್ಗು ಪ್ರದೇಶಗಳಳ್ಲಿ ಕೃತಕ ನೆರೆಯ ಅಪಾಯ ಎದುರಾಗಿದೆ.