LATEST NEWS
ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ

ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ
ಉಡುಪಿ ಫೆಬ್ರವರಿ 21: ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಕರಾವಳಿ ಪ್ರವಾಸದ ಮೂರನೇ ದಿನದ ಅಂಗವಾಗಿ ಇಂದು ಬೆಳಿಗ್ಗೆ ಪಲಿಮಾರು ಮಠದ ಛತ್ರ ರಾಮದಾಮ ವನ್ನು ಉದ್ಘಾಟಿಸಿದರು. ನಂತರ ಕೃಷ್ಣ ಮಠಕ್ಕೆ ತೆರಳಿದ ಅಮಿತ ಶಾ ಶ್ರೀಕೃಷ್ಣನ ದರ್ಶನ ಮಾಡಿದರು.
ಪಂಚೆ , ಶಲ್ಯ ತೊಟ್ಟು ಬಂದ ಅಮಿತ್ ಶಾ ಕನಕ ನವಗ್ರಹ ಕಿಂಡಿಯ ಮೂಲಕ ದೇವರ ದರ್ಶನ ಮಾಡಿದರು. ಶ್ರೀಕೃಷ್ಣನಿಗೆ ಮಹಾಪೂಜೆ ನಡೆಯುವ ಸಂದರ್ಭದಲ್ಲೇ ಶಾ ಭೇಟಿ ನೀಡಿದ್ದು ವಿಶೇಷವಾಗಿತ್ತು. ಅಮಿತ್ ಶಾ ಅವರ ಜೊತೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮುರಳೀಧರ್ ರಾವ್, ಸಂತೋಷ್, ಶೋಭಾ ಕರಂದ್ಲಾಜೆ ಮತ್ತಿತರರು ಉಪಸ್ಥಿತರಿದ್ದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಕೃಷ್ಣನ ದರ್ಶನ ಮಾಡಿ ಧನ್ಯನಾದೆ ಎಂದು ಹೇಳಿದರು. ಅದರಲ್ಲೂ ಬೆಳಗ್ಗೆಯೇ ದೇವರ ದರ್ಶನ ಸಿಕ್ಕಿದ್ದು ನನಗೆ ಸಂತೃಪ್ತಿಯಾಗಿದೆ ಎಂದರು. ಪರ್ಯಾಯ ಪೀಠಾಧಿಪತಿ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಯ ಭೇಟಿಯೂ ಮನಸ್ಸಿಗೆ ಖುಷಿಯಾಗಿದೆ ಅಲ್ಲದೆ ನಿನ್ನೆ ನಜೆದ ಸಂತರ ಭೇಟಿಯೂ ನನ್ನ ಪಾಲಿಗೆ ಒಲಿದಿದೆ ಎಂದು ಹೇಳಿದರು.