FILM
ಹೋಳಿ ಸಂಭ್ರಮದಲ್ಲಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಭಚ್ಚನ್ – ಡೈವೋರ್ಸ್ ವದಂತಿಗೆ ಪುಲ್ ಸ್ಟಾಪ್

ಮುಂಬೈ ಮಾರ್ಚ್ 25: ದೇಶದಲ್ಲಿ ಹೋಳಿ ಸಂಭ್ರಮ ಮನೆಮಾಡಿದೆ. ಉತ್ತರ ಭಾರತದಲ್ಲಿ ಹೋಳಿ ಸಂಭ್ರಮದಿಂದ ಆಚರಿಸುತ್ತಾರೆ. ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಅನೇಕರು ಇದರಲ್ಲಿ ಭಾಗಿ ಆಗುತ್ತಿದ್ದಾರೆ. ಬಣ್ಣ ಹಚ್ಚಿ ಸಂಭ್ರಮಿಸಲಾಗುತ್ತಿದೆ. ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಮನೆಯಲ್ಲೂ ಹೋಳಿ ಸಂಭ್ರಮ ನಡೆದಿದ್ದು, ಐಶ್ವರ್ಯ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಒಟ್ಟಾಗಿ ಹೋಳಿ ಆಚರಿಸಿದ್ದಾರೆ.
ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಬಚ್ಚನ್ ವಿಚ್ಛೇದನ ವದಂತಿ ಕಳೆದ ವರ್ಷವೇ ಹುಟ್ಟಿಕೊಂಡಿತ್ತು. ಆದರೆ, ಇದರಲ್ಲಿ ನಿಜವಿಲ್ಲ ಎನ್ನುವ ವಿಚಾರ ಆಗಾಗ ಸಾಬೀತು ಆಗುತ್ತಲೇ ಇರುತ್ತದೆ. ಆದಾಗ್ಯೂ ಕೆಲವರಿಗೆ ಈ ಬಗ್ಗೆ ಇನ್ನೂ ಅನುಮಾನಗಳು ಇವೆ. ಅಂಥವರಿಗೆ ಈ ಫೋಟೋಗಳು ಸ್ಪಷ್ಟನೆ ನೀಡುವಂತೆ ಇದೆ.

ಬಚ್ಚನ್ ಕುಟುಂಬ ಈ ವರ್ಷ ಹೋಲಿಕಾ ದಹನ್ ಅನ್ನು ತಮ್ಮ ಮುಂಬೈನ ಮನೆ ಪ್ರತೀಕ್ಷಾದಲ್ಲಿ ಸಂಭ್ರಮದಿಂದ ಆಚರಿಸಿತು. ಅಭಿಷೇಕ್ ಬಚ್ಚನ್ ಮತ್ತು ನವ್ಯಾ ನವೇಲಿ ನಂದಾ ತಮ್ಮ ಸಂಭ್ರಮಾಚರಣೆಯ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ನವ್ಯಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಫೋಟೋಗಳಲ್ಲಿ ಅಭಿಷೇಕ್ ಬೆಂಕಿಯ ಮುಂದೆ ಕುಳಿತಿರುವುದನ್ನು ತೋರಿಸಿದೆ. ಮತ್ತೊಂದು ಪೋಟೋದಲ್ಲಿ ಐಶ್ವರ್ಯಾ ರೈ ಅವರ ಹಣೆಯ ಮೇಲೆ ಕುಂಕುಮ ಹಾಕಿಕೊಂಡು ನಿಂತಿರುವುದು ಕಂಡು ಬಂದಿದೆ.
ಈ ಮೂಲಕ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ ಡೈವೋರ್ಸ್ ವದಂತಿಗಳಿಗೆ ಒಂದು ಪುಲ್ ಸ್ಟಾಪ್ ಬಿದ್ದ ಹಾಗೆ ಆಗಿದೆ.