LATEST NEWS
ಅಮೇರಿಕಾದಲ್ಲಿ ಭಾರತೀಯ ವಿಧ್ಯಾರ್ಥಿಗಳ ಸಾವಿನ ಸರಣಿ – ಮತ್ತೊಬ್ಬ ವಿಧ್ಯಾರ್ಥಿಯ ಶವ ಪತ್ತೆ
ಅಮೇರಿಕಾ ಎಪ್ರಿಲ್ 9: ಅಮೇರಿಕಾದಲ್ಲಿ ಭಾರತೀಯ ವಿಧ್ಯಾರ್ಥಿಗಳ ಸಾವಿನ ಸರಣಿ ಮುಂದುವರೆದಿದ್ದು, ಇದೀಗ ನಾಪತ್ತೆಯಾಗಿದ್ದ ವಿಧ್ಯಾರ್ಥಿಯೊಬ್ಬನ ಶವ ಪತ್ತೆಯಾಗಿದೆ. ಇದರೊಂದಿಗೆ ಒಂದು ವರ್ಷದಲ್ಲಿ ಅಮೇರಿಕಾದಲ್ಲಿ ಸಾವನಪ್ಪಿದ 11ನೇ ಭಾರತೀಯ ವಿಧ್ಯಾರ್ಥಿ.
ಕ್ಲೀವ್‌ಲ್ಯಾಂಡ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಸ್ನಾತಕೋತ್ತರ ಪದವಿಗಾಗಿ 2023 ರಲ್ಲಿ ಯುಎಸ್‌ಗೆ ತೆರಳಿದ್ದ ಹೈದರಾಬಾದ್‌ನ 25 ವರ್ಷದ ವಿದ್ಯಾರ್ಥಿಯೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ.
ಮೊಹಮ್ಮದ್ ಅಬ್ದುಲ್ ಅರ್ಫಾತ್ ಸುಮಾರು ಮೂರು ವಾರಗಳಿಂದ ನಾಪತ್ತೆಯಾಗಿದ್ದರು ಮತ್ತು ದೂತಾವಾಸವು ಅಬ್ದುಲ್ ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿದೆ ಮತ್ತು ಅವರನ್ನು ಪತ್ತೆಹಚ್ಚಲು ಸ್ಥಳೀಯ ಕಾನೂನು ಜಾರಿ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದೆ ಎಂದು ಈ ಹಿಂದೆ ತಿಳಿಸಿತ್ತು. ಇಂದು ಬೆಳಗ್ಗೆ ಅವರು ಶವವಾಗಿ ಪತ್ತೆಯಾಗಿದ್ದಾರೆ ಎಂದು ರಾಯಭಾರ ಕಚೇರಿ ತಿಳಿಸಿದೆ. ಮಾರ್ಚ್ 7 ರಂದು ಕುಟುಂಬದವರೊಂದಿಗೆ ಮಾತನಾಡಿದ್ದರು, ನಂತರ ಅವರ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು ಎಂದು ಅರ್ಫಾತ್ ತಂದೆ ತಿಳಿಸಿದ್ದಾರೆ. ಅಪರಿಚಿತ ಸಂಖ್ಯೆಯಿಂದ ಕರೆ ಬಂದಿತ್ತು ಬಳಿಕ ಮಗನನ್ನು ಅಪಹರಿಸಿದ್ದೇವೆ ಹಣ ಕೊಡಿ ಎಂದು ಬೇಡಿಕೆ ಇಟ್ಟಿದ್ದಾಗಿ ಹೇಳಿದ್ದಾರೆ.
ಅಬ್ದುಲ್ ಈ ವರ್ಷ ಅಮೇರಿಕಾದಲ್ಲಿ ಸಾವನ್ನಪ್ಪಿದ ಹನ್ನೊಂದನೇ ಭಾರತೀಯ. ಅವರಲ್ಲಿ ಎಂಟು ಮಂದಿ ವಿದ್ಯಾರ್ಥಿಗಳು. ಅಮೆರಿಕದಲ್ಲಿರುವ ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬವನ್ನು ಈ ಘಟನೆಗಳು ಆತಂಕಕ್ಕೀಡು ಮಾಡಿವೆ.
2022-23ರಲ್ಲಿ ಅಮೆರಿಕದ ಹಲವು ಭಾರತೀಯ ವಿದ್ಯಾರ್ಥಿಗಳು ಮೊದಲ ಬಾರಿಗೆ ಜಿಆರ್‌ಇ ಪರೀಕ್ಷೆ ತೆಗೆದುಕೊಂಡಿದ್ದು, 2024ರಿಂದ ಅಮೆರಿಕದಲ್ಲಿ ಭಾರತೀಯ ಮತ್ತು ಭಾರತೀಯ ಮೂಲದ ವಿದ್ಯಾರ್ಥಿಗಳ ಸಾವಿನ ಪ್ರಕರಣಗಳು ವರದಿಯಾಗಿವೆ.