Connect with us

LATEST NEWS

ಸಂವಿಧಾನ ರಚಿಸಿದ್ದು ಅಂಬೇಡ್ಕರ್ ಮಾತ್ರವಲ್ಲ- ಪುನರುಚ್ಚರಿಸಿದ ಪೇಜಾವರ ಶ್ರೀ

ಸಂವಿಧಾನ ರಚಿಸಿದ್ದು ಅಂಬೇಡ್ಕರ್ ಮಾತ್ರವಲ್ಲ- ಪುನರುಚ್ಚರಿಸಿದ ಪೇಜಾವರ ಶ್ರೀ

ಉಡುಪಿ,ನವೆಂಬರ್ 27: ಸಂವಿಧಾನ ರಚಿಸಿದ್ದು ಕೇವಲ ಬಿ.ಆರ್.ಅಂಬೇಡ್ಕರ್ ಮಾತ್ರವಲ್ಲ, ಇದರ ಹಿಂದೆ ಹಲವರ ಶ್ರಮವಿದೆ ಎಂದು ಪೇಜಾವರ ವಿಶ್ವೇಶತೀರ್ಥ್ ಸ್ವಾಮೀಜಿ ಪುನರುಚ್ಛರಿಸಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು ಕೆಲವು ಬುದ್ಧಿ ಜೀವಿಗಳೆಂದು ತಿಳಿದುಕೊಂಡವರು ಈ ವಿಚಾರವನ್ನು ಮಾತ್ರ ಸಮಾಜದ ಮುಂದೆ ತಿಳಿಸುವ ಪ್ರಯತ್ನವನ್ನು ನಡೆಸುತ್ತಿದ್ದಾರೆ. ಸಂವಿಧಾನ ರಚನೆಯಲ್ಲಿ ಬಿ.ಆರ್.ಅಂಬೇಡ್ಕರ್ ಜೊತೆಗೆ ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಕೆ.ಎಂ ಮುನ್ಶಿ, ಬೆನಗಲ್ ಮುಂತಾದವರೂ ಕೈ ಜೋಡಿಸಿದ್ದರು ಎಂದರು. ಉಡುಪಿಯಲ್ಲಿ ನಡೆದ ಧರ್ಮ ಸಂಸತ್ತ್ ನಲ್ಲಿ ದಲಿತ ಮೀಸಲಾತಿ ವಿಚಾರದ ಬಗ್ಗೆ ಚರ್ಚೆಯೇ ನಡೆದಿಲ್ಲ. ಅಲ್ಪಸಂಖ್ಯಾತರ ಮೀಸಲಾತಿ ಕುರಿತು ಚರ್ಚೆ ನಡೆದಿದ್ದಾದರೂ, ಅಲ್ಪಸಂಖ್ಯಾತರಲ್ಲಿ ದಲಿತ ಸಮುದಾಯ ಬರುವುದಿಲ್ಲ ಎನ್ನುವುದು ಬುದ್ಧಿ ಜೀವಿಗಳಿಗೆ ತಿಳಿದಿಲ್ಲವೇ ಎಂದು ಪ್ರಶ್ನಿಸಿದ ಅವರು ಧರ್ಮದ ಹೆಸರಿನಲ್ಲಿ ಸಮಾಜದ ವಿಭಜನೆ ಬೇಡ ಎಂದರು. ಕೇವಲ ಅಲ್ಪಸಂಖ್ಯಾತರಿಗೆ ಶಾದಿ ಭಾಗ್ಯವನ್ನು ಕಲ್ಪಿಸಿರುವ ರಾಜ್ಯ ಸರಕಾರಕ್ಕೆ ದಲಿತರಲ್ಲೂ ಬಡ ಕುಟುಂಬಗಳಿವೆ ಎನ್ನುವುದು ತಿಳಿದಿಲ್ಲವೇ ಎಂದರು. ಉಡುಪಿಯಲ್ಲಿ ನಡೆದ ಧರ್ಮ ಸಂಸತ್ತು ಯಶಸ್ವಿಯಾಗಿದ್ದು, ಇದನ್ನು ಸಹಿಸಲು ಬುದ್ಧಿಜೀವಿಗಳಿಗೆ ಆಗುತ್ತಿಲ್ಲ ಎಂದರು. ತಮ್ಮ ಲಾಭಕ್ಕಾಗಿ ಸಾಹಿತಿಗಳು ಬಡ ದಲಿತರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಅವರು ಇದೇ ಸಂದರ್ಭದಲ್ಲಿ ಆರೋಪಿಸಿದರು. ಮುಖ್ಯಮಂತ್ರಿ ಸಿದ್ಧರಾಮಯ್ಯ ಬಸವಣ್ಣನ ಅನುಯಾಯಿಯಾಗಿದ್ದಲ್ಲಿ ಗೋ ಹತ್ಯೆಯನ್ನು ನಿಶೇಧಿಸಬೇಕಿತ್ತು. ಏಕೆಂದರೆ ಬಸವಣ್ಣನವರು ಗೋ ಹತ್ಯೆಯ ವಿರೋಧಿಯಾಗಿದ್ದರು ಎಂದ ಅವರು ಸಾಹಿತಿ ಚಂಪಾ ಹಾಗೂ ತನ್ನ ನಡುವೆ ಅಭಿಪ್ರಾಯ ಬೇಧ ಮಾತ್ರವಿದೆ ಎಂದು ಸ್ಪಷ್ಟಪಡಿಸಿದರು.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *