Connect with us

    DAKSHINA KANNADA

    ಪ್ರಧಾನಿ ಮೋದಿ ಸಿದ್ಧರಾಮಯ್ಯರ ಆಡಳಿತ ವೈಖರಿ ನೋಡಿ ಕಲಿಯಲಿ- ಯು.ಟಿ.ಖಾದರ್

    ಪ್ರಧಾನಿ ಮೋದಿ ಸಿದ್ಧರಾಮಯ್ಯರ ಆಡಳಿತ ವೈಖರಿ ನೋಡಿ ಕಲಿಯಲಿ- ಯು.ಟಿ.ಖಾದರ್

    ಮಂಗಳೂರು,ನವಂಬರ್ 27: ಸಚಿವ ಜಾರ್ಜ್ ಹಾಗೂ ವಿನಯ್ ಕುಲಕರ್ಣಿ ಮೇಲಿರುವಂತೆಯೇ ಹಲವು ಬಿಜೆಪಿ ನಾಯಕರ ಮೇಲೂ ಪ್ರಕರಣವಿದೆ ಎಂದು ಆಹಾರ ಸಚಿವ ಯು.ಟಿ.ಖಾದರ್ ತಮ್ಮ ಸಂಪುಟ ಸಚಿವರನ್ನು ಸಮರ್ಥಿಸಿಕೊಂಡಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು ಬಿಜೆಪಿ ಸಚಿವ ಜಾರ್ಜ್ ಹಾಗೂ ವಿನಯ್ ಕುಲಕರ್ಣಿ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವುದು ನಾಚಿಗೇಡಿನ ಸಂಗತಿ ಎಂದರು.

    ಬಿಜೆಪಿಯವರಿಗೆ ಜಾರ್ಜ್ ಹಾಗೂ ವಿನಯ್ ಕುಲಕರ್ಣಿ ರಾಜೀನಾಮೆಯನ್ನು ಕೇಳುವ ನೈತಿಕತೆಯಿಲ್ಲ. ಬಿಜೆಪಿಯ ಹಲವು ನಾಯಕರ ಮೇಲೆ ಪ್ರಕರಣಗಳು ದಾಖಲಾಗಿದ್ದು, ಶೋಭಾ ಕರಂದ್ಲಾಜೆಯಂತಹ ನಾಯಕರು ಈ ವಿಚಾರದಲ್ಲಿ ಜನತೆಯ ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ಬಿಜೆಪಿಯವರ ಮೇಲೆ ಪ್ರಕರಣ ದಾಖಲಾದಂತೆ ಕಾಂಗ್ರೇಸ್ ನಾಯಕರ ಮೇಲೂ ಪ್ರಕರಣ ದಾಖಲಾಗಿದೆ ಎಂದು ಅವರು ಇಬ್ಬರು ಸಚಿವರನ್ನು ಸಮರ್ಥಿಸಿಕೊಂಡರು. ಮುಖ್ಯಮಂತ್ರಿ ಸಿದ್ಧರಾಮಯ್ಯ ಸಂವಿಧಾನದ ತತ್ವದಡಿ ಕಾರ್ಯ ನಿರ್ವಹಿಸುತ್ತಿದ್ದು, ದೇಶದ ಪ್ರಧಾನಿ ಹಾಗೂ ಇತರೆ ರಾಜ್ಯದ ಮುಖ್ಯಮಂತ್ರಿಗಳು ಸಿದ್ಧರಾಮಯ್ಯರನ್ನು ನೋಡಿ ಕಲಿಯಬೇಕಿದೆ ಎಂದರು. ಸಚಿವ ಜಾರ್ಜ್ ಹಾಗೂ ವಿನಯ್ ಕುಲಕರ್ಣಿ ವಿಚಾರದಲ್ಲಿ ಸದನದ ಸಮಯ ವ್ಯರ್ಥವಾಗುತ್ತಿದ್ದು, ಚರ್ಚೆಗಳೇ ನಡೆಯುತ್ತಿಲ್ಲ ಎಂದ ಅವರು ಜಿಎಸ್ಟಿ ಒಂದು ಉತ್ತಮ ಯೋಜನೆಯಾಗಿದ್ದರೂ, ಕೇಂದ್ರ ಸರಕಾರ ಅದರ ನಿರ್ವಹಣೆಯಲ್ಲಿ ಎಡವಿದೆ ಎಂದು ಆರೋಪಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply