Connect with us

UDUPI

ಉಡುಪಿಯಲ್ಲಿ ಅಂಬೇಡ್ಕರ್ ಜನ್ಮದಿನೋತ್ಸವ ಆಚರಣೆ

ಉಡುಪಿಯಲ್ಲಿ ಅಂಬೇಡ್ಕರ್ ಜನ್ಮದಿನೋತ್ಸವ ಆಚರಣೆ

ಉಡುಪಿ, ಏಪ್ರಿಲ್ 14 :ಭಾರತದ ಪ್ರತಿಯೊಬ್ಬ ಪ್ರಜೆಗೆ ಸ್ವಾತಂತ್ರ್ಯದ ಜೊತೆಗೆ ಸಮಾನತೆಯ ಅವಕಾಶವನ್ನು ಕಲ್ಪಿಸಿದ ಸಂವಿಧಾನವನ್ನು ನೀಡಿದ ಸಂವಿಧಾನಶಿಲ್ಪಿ ಡಾ ಬಿ. ಆರ್ ಅಂಬೇಡ್ಕರ್ ಅವರು ಸದಾ ಸ್ಮರಣೀಯರು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಅವರು ಹೇಳಿದರು.

ಅವರಿಂದು ಆದಿ ಉಡುಪಿ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾದ ಡಾ ಬಿ ಆರ್ ಅಂಬೇಡ್ಕರ್ ಅವರು 127ನೇ ಜನ್ಮ ದಿನೋತ್ಸವ ಆಚರಣಾ ಸಮಾರಂಭವನ್ನು ದೀಪ ಬೆಳಗಿ ಉದ್ಘಾಟಿಸಿ ಮಾತನಾಡುತ್ತಿದ್ದರು.

ಭಾರತ ವಿಶ್ವದಲ್ಲಿಯೇ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಲು ಡಾ ಬಿ ಆರ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಮುಖ್ಯ ತಳಹದಿಯಾಗಿದ್ದು, ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಇಂದು ವಿಶ್ವದ ಗಮನಸೆಳೆದಿದೆ ಎಂದು. ಸಂವಿಧಾನದ ಆಶಯವನ್ನು ಪ್ರತಿಯೊಬ್ಬರ ಅಳವಡಿಸಿಕೊಳ್ಳುವ ಮೂಲಕ ನಾವು ಅಂಬೇಡ್ಕರ್ ಆದರ್ಶಗಳನ್ನು ಪಾಲಿಸಬೇಕಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು, ಸಂವಿಧಾನದಲ್ಲಿ ಸಮಾನತೆಯ ಹಕ್ಕನ್ನು ನೀಡಿ ದನಿ ಇಲ್ಲದವರಿಗೆ ದನಿಯಾದ ಅಂಬೇಡ್ಕರ್ ಅವರು, ಮಹಿಳಾ ಸಶಕ್ತೀಕರಣಕ್ಕೆ ನೀಡಿದ ಕೊಡುಗೆ ಅಮೂಲ್ಯ ಎಂದರು.

ಅವರ ನೀತಿ ನಿರೂಪಣೆಯಿಂದ ಸಾಮಾಜಿಕ ಪಿಡುಗುಗಳು ನಾಶವಾಗಿದೆ. ಮಹಿಳೆಯರು, ಕಾರ್ಮಿಕರನ್ನೊಳಗೊಂಡಂತೆ ಸಮಾಜ ಎಲ್ಲ ವರ್ಗಗಳಿಗೆ ನ್ಯಾಯದೊರಕಿದೆ ಎಂದರು. ಪ್ರಜಾಪ್ರಭುತ್ವದ ಯಶಸ್ಸಿಗೆ ಮತದಾನ ಅಗತ್ಯವಾಗಿದ್ದು, ಆಮಿಷಕ್ಕೆ ಒಳಗಾಗದೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಎಲ್ಲರೂ ಮತದಾನ ಮಾಡಿ ಎಂದು ಜಿಲ್ಲಾಧಿಕಾರಿಗಳು ಮತದಾನದ ಮಹತ್ವವನ್ನು ವಿವರಿಸಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *