DAKSHINA KANNADA
ಜನವರಿ 12ರಿಂದ 14ರವರೆಗೆ ಆಳ್ವಾಸ್ ವಿರಾಸತ್ 2018

ಜನವರಿ 12ರಿಂದ 14ರವರೆಗೆ ಆಳ್ವಾಸ್ ವಿರಾಸತ್ 2018
ಮಂಗಳೂರು ಡಿಸೆಂಬರ್ 16: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ದಿಂದ ಪ್ರತಿವರ್ಷ ಆಯೋಜಿಸಲಾಗುವ ಪ್ರಸಿದ್ಧ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ ಇದೇ ಬರುವ ಜನವರಿ 12ರಿಂದ 14ರವರೆಗೆ ನಡೆಯಲಿದೆ. 24ನೇ ವರ್ಷದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವವು ಪುತ್ತಿಗೆ ವಿವೇಕಾನಂದ ನಗರದಲ್ಲಿರುವ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗ ವೇದಿಕೆಯಲ್ಲಿ ನಡೆಯಲಿದೆ.
ವಿರಾಸತ್ ಕಾರ್ಯಕ್ರಮಗಳು ದಿನವೊಂದಕ್ಕೆ ಎರಡು ಅವಧಿಗಳದ್ದಾಗಿದ್ದು ಪೂರ್ವಾರ್ಧದಲ್ಲಿ ಸಂಗೀತ ಹಾಗು ಉತ್ತಾರಾರ್ಧದಲ್ಲಿ ನೃತ್ಯ ಕಾರ್ಯಕ್ರಮಗಳು ಸಂಸ್ಕೃತಿ ಪ್ರಿಯರ ಮನಸ್ಸನ್ನು ಸೂರೆಗೊಳ್ಳಲಿವೆ. ಪ್ರತಿದಿನ ಮುಸ್ಸಂಜೆ 6.00 ಗಂಟೆಗೆ ಪ್ರಾರಂಭವಾಗುವ ಕಾರ್ಯಕ್ರಮಗಳು ರಾತ್ರಿ 10.30ಕ್ಕೆ ಮುಕ್ತಾಯಗೊಳ್ಳುತ್ತವೆ.

ಜನವರಿ 12ರಂದು 1ದಿನ ಮಾತ್ರ ಮುಸ್ಸಂಜೆ 5.15ರಿಂದ ಮೆರವಣಿಗೆಯೊಂದಿಗೆ ಪ್ರಾರಂಭಗೊಂಡು 5.30ರಿಂದ 6.30ರವರೆಗೆ 60 ನಿಮಿಷಗಳ ಉದ್ಘಾಟನೆಯ ಸಭಾಕಾರ್ಯಕ್ರಮವಿರುತ್ತದೆ. 150 ಅಡಿ ಉದ್ದದ 60 ಅಡಿ ಅಗಲದ ಬೃಹತ್ ವೇದಿಕೆ ನಿರ್ಮಾಣವಾಗಲಿದ್ದು 40 ಸಾವಿರಕ್ಕಿಂತ ಹೆಚ್ಚಿನ ಪ್ರೇಕ್ಷಕರು ಕುಳಿತು ನೋಡಲು ಅವಕಾಶವಿರುವ ವಿಶಾಲ ಪ್ರದೇಶದಲ್ಲಿ ವಿರಾಸತ್ ನಡೆಯಲಿದೆ.