LATEST NEWS
ಕಸ ಹಾಕಿದ ಆಳ್ವಾಸ್ ವಿಧ್ಯಾರ್ಥಿಗಳಿಗೆ ಸ್ವಚ್ಚಭಾರತ್ ಪಾಠ ಮಾಡಿದ ಸಾರ್ವಜನಿಕರು
ಕಸ ಹಾಕಿದ ಆಳ್ವಾಸ್ ವಿಧ್ಯಾರ್ಥಿಗಳಿಗೆ ಸ್ವಚ್ಚಭಾರತ್ ಪಾಠ ಮಾಡಿದ ಸಾರ್ವಜನಿಕರು
ಮಂಗಳೂರು ಮಾರ್ಚ್ 18: ಆಳ್ವಾಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಸಂಸ್ಥೆಯ ಬಸ್ಸಿನಲ್ಲಿ ಹೋಗುವ ಸಮಯದಲ್ಲಿ ಪ್ರಶ್ನೆ ಪತ್ರಿಕೆಯನ್ನು ಹರಿದು ರೋಡ್ ನಲ್ಲಿ ಹರಿದು ಬಿಸಾಕಿ ಸಂಭ್ರಮಾಚರಣೆ ನಡೆಸಿದ ವಿದ್ಯಾರ್ಥಿಗಳಿಗೆ ಮೂಡಬಿದರೆ ಜನತೆ ಅವರಿಂದಲೇ ಕಸ ತೆಗೆಸಿ ಪಾಠ ಕಲಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಳ್ವಾಸ್ ವಿದ್ಯಾರ್ಥಿಗಳಿಗೆ ಮಹಾವೀರ ಕಾಲೇಜಿನಲ್ಲಿ ಪರೀಕ್ಷಾ ಕೇಂದ್ರವಿದ್ದು , ಪರೀಕ್ಷೆ ಮುಗಿದ ಬಳಿಕ ಆಳ್ವಾಸ್ ಸಂಸ್ಥೆ ಯ ಬಸ್ ನಲ್ಲಿ ವಿದ್ಯಾರ್ಥಿಗಳು ಮರಳಿ ಅವರದೇ ಕಾಲೇಜಿಗೆ ತೆರಳುತ್ತಿದ್ದರು. ಆಗ ಬಸ್ ನಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಮುಗಿಸಿದ ಸಂಭ್ರಮಾಚರಣೆಯಲ್ಲಿ ತಮ್ಮ ಪುಸ್ತಕ ವನ್ನು ಹರಿದು ಬಸ್ ನಿಂದ ಹೊರಗೆ ಎಸೆಯುತ್ತಾ ಬೊಬ್ಬೆ ಹಾಕುತ್ತಾ ಮಹಾವೀರ ಕಾಲೇಜ್ ನಿಂದ ಮೂಡಬಿದಿರೆ ಪೇಟೆ ತನಕ ಸಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಸುಮಾರು ಒಂದು ಕಿ.ಮೀ. ದಾರಿಯುದ್ದಕ್ಕೂ ಪುಸ್ತಕಗಳನ್ನು ಹರಿದು ಬಿಸಾಡುತ್ತಾ, ರಸ್ತೆಯಲ್ಲಿ ಸಂಚರಿಸುವ ಇತರ ವಾಹನ ಸವಾರರಿಗೆ ವಿದ್ಯಾರ್ಥಿಗಳು ತೊಂದರೆ ನೀಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಂಘಟನೆಯ ಮುಖಂಡರು, ಸ್ಥಳೀಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬಸ್ ಅನ್ನು ಹಿಂಬಾಲಿಸಿ ಮೂಡಬಿದಿರೆ ಪೇಟೆಯಲ್ಲಿ ನಿಲ್ಲಿಸಿ ತರಾಟೆಗೆ ತೆಗೆದುಕೊಂಡಿದ್ದರು. ನಂತರ ಅದೇ ವಿದ್ಯಾರ್ಥಿ ಗಳನ್ನು ಬಸ್ ನಿಂದ ಕೆಳಗೆ ಅವರಿಂದಲೇ ದಾರಿಯುದ್ದಕ್ಕೂ ಅವರೇ ಬಿಸಾಡಿದ ಕಸವನ್ನು ಹೆಕ್ಕಿಸಿ ಸ್ವಚ್ಚ ಭಾರತದ ಪಾಠವನ್ನು ಮಾಡಿದರು ಎಂದು ಹೇಳಲಾಗಿದೆ. ಈ ಸಂಬಂಧ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.