LATEST NEWS
ದಕ್ಷಿಣಕನ್ನಡ ಜಿಲ್ಲೆಯ ಪ್ರಥಮ ಪಿಯುಸಿ ರಿಸಲ್ಟ್ ನಾಳೆ ಆನ್ ಲೈನ್ ನಲ್ಲಿ ಲಭ್ಯ
ದಕ್ಷಿಣಕನ್ನಡ ಜಿಲ್ಲೆಯ ಪ್ರಥಮ ಪಿಯುಸಿ ರಿಸಲ್ಟ್ ನಾಳೆ ಆನ್ ಲೈನ್ ನಲ್ಲಿ ಲಭ್ಯ
ಮಂಗಳೂರು ಮಾರ್ಚ್ 18: ರಾಜ್ಯದಲ್ಲಿ ಪ್ರಥಮಬಾರಿಗೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪ್ರಥಮ ಪಿಯುಸಿ ಪರಿಕ್ಷೆಯ ಫಲಿತಾಂಶವನ್ನು ಆನ್ ಲೈನ್ ನಲ್ಲಿ ಪ್ರಕಟಿಸಲಾಗುವುದು. ಪ್ರಥಮ ಪಿಯುಸಿ ಪಲಿತಾಂಶವು ನಾಳೆ 19 ರಂದು ಬೆಳಿಗ್ಗೆ 8 ಗಂಟೆಗೆ http://result.dkpucpa.com/ ವೆಬ್ ಸೈಟ್ ನಲ್ಲಿ ಫಲಿತಾಂಶವನ್ನು ಪ್ರಕಟಿಸಲಾಗುವುದು.
ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘವು ಪದವಿಪೂರ್ವ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಈ ಹೊಸ ತಂತ್ರಾಂಶವನ್ನು ಅಭಿವೃದ್ದಿಪಡಿಸಿದೆ. ಜಿಲ್ಲೆಯ ಸರ್ಕಾರಿ, ಅನುದಾನಿತ, ಅನುದಾನ ರಹಿತ ಕಾಲೇಜುಗಳ ಫಲಿತಾಂಶವನ್ನು ಈ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು, ಪ್ರಥಮ ಹಂತದಲ್ಲಿ ಈ ಸೌಲಭ್ಯ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಜಾರಿಯಾಗಲಿದ್ದು ಮುಂದಿನ ಹಂತದಲ್ಲಿ ರಾಜ್ಯದಾದ್ಯಂತ ಅನುಷ್ಠಾನಗೊಳಿಸುವ ಕುರಿತು ಹಿರಿಯ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
ನಿರ್ದಿಷ್ಠ ಸ್ಥಳಗಳಲ್ಲಿ ಕಲಿಯುತ್ತಿರುವ ವಿಧ್ಯಾರ್ಥಿಗಳು ಕಾಲೇಜಿನ ಹೆಸರು , ರೋಲ್ ನಂಬರ್ ಹಾಗೂ ಹುಟ್ಟಿದ ದಿನಾಂಕವನ್ನು ವೆಬ್ ಸೈಟ್ ನಲ್ಲಿ ನಮೂದಿಸಬೇಕು , ಬಳಿಕ ಫಲಿತಾಂಶ ಬಟನ್ ಒತ್ತಿದರೆ ಫಲಿತಾಂಶ ಪುಟ ತೆರೆದುಕೊಳ್ಳುತ್ತದೆ.
You must be logged in to post a comment Login