DAKSHINA KANNADA
ಕಾವ್ಯಾ ನಿಗೂಢ ಸಾವಿನ ವಿಚಾರ ತನಿಖೆಗೆ ಎಸಿಪಿಗೆ ಆದೇಶ-ಮಂಗಳೂರು ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್

ಕಾವ್ಯಾ ನಿಗೂಢ ಸಾವಿನ ವಿಚಾರ ತನಿಖೆಗೆ ಎಸಿಪಿಗೆ ಆದೇಶ-ಮಂಗಳೂರು ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್
ಮಂಗಳೂರು ಜುಲೈ 28 – ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ಎಸ್ಎಸ್ಎಲ್ ಸಿ ವಿದ್ಯಾರ್ಥಿನಿ ಕಾವ್ಯಾ ನಿಗೂಢ ಸಾವಿನ ಪ್ರಕರಣವನ್ನು ಎಸಿಪಿ ಮೂಲಕ ತನಿಖೆಗೆ ಮಂಗಳೂರು ಪೊಲೀಸ್ ಕಮಿಷನರ್ ಟಿ.ಆರ್ ಸುರೇಶ್ ಆದೇಶಿಸಿದ್ದಾರೆ. ಜುಲೈ 20 ರಂದು ಆಳ್ವಾಸ್ ಕಾಲೇಜಿನ ಹಾಸ್ಟೆಲ್ ನಲ್ಲಿ ಕಾವ್ಯಾ ನೇಣು ಬಿಗಿದು ಆತ್ಮಹತ್ಯೆ ಮಾಡಿದ್ದರು, ಆದರೆ ಕಾವ್ಯಾ ಹೆತ್ತವರು ಈ ಆತ್ಮಹತ್ಯೆಯ ಬಗ್ಗೆ ಅನೇಕ ಸಂದೇಹಗಳನ್ನು ವ್ಯಕ್ತಪಡಿಸಿದ್ದರ ಹಿನ್ನಲೆಯಲ್ಲಿ ಎಸಿಪಿ ಮೂಲಕ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ.
