SPORTS
ಅಖಿಲ ಭಾರತ ವಿವಿ ಕ್ರಾಸ್ ಕಂಟ್ರಿ:ಆಳ್ವಾಸ್ ಕ್ರೀಡಾಪಟುಗಳ ಮಹತ್ತರ ಸಾಧನೆ
ಅಖಿಲ ಭಾರತ ವಿವಿ ಕ್ರಾಸ್ ಕಂಟ್ರಿ:ಆಳ್ವಾಸ್ ಕ್ರೀಡಾಪಟುಗಳ ಮಹತ್ತರ ಸಾಧನೆ
ಮಂಗಳೂರು, ನವೆಂಬರ್ 01: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಆಶ್ರಯದಲ್ಲಿ ಮುಕ್ತಾಯಗೊಂಡ 2017-18ನೇ ಸಾಲಿನ ಅಖಿಲ ಭಾರತ ಅಂತರ್ ವಿವಿ ಕ್ರಾಸ್‍ಕಂಟ್ರಿ ಚಾಂಪಿಯನ್‍ಶಿಪ್‍ನಲ್ಲಿ ಮಂಗಳೂರು ವಿವಿ ಚಾಂಪಿಯನ್‍ಗಳಿಸುವ ಮೂಲಕ ಐತಿಹಾಸಿಕ ಸಾಧನೆ ಮೆರೆದಿದೆ.
ಈ ಸಾಧನೆಯ ಹಿಂದೆ ಮೂಡುಬಿದಿರೆಯ ಆಳ್ವಾಸ್ ಕ್ರೀಡಾಪಟುಗಳ ಕೊಡುಗೆ ಅಪಾರ.
ಅಖಿಲ ಭಾರತ ವಿ.ವಿ. ಕ್ರಾಸ್‍ಕಂಟ್ರಿಯಲ್ಲಿ ಮಂಗಳೂರು ವಿ.ವಿ.ಯ ಹ್ಯಾಟ್ರಿಕ್ ಸಾಧನೆಯಲ್ಲಿ ಆಳ್ವಾಸ್ ಸಂಸ್ಥೆಯ ವಿದ್ಯಾರ್ಥಿಗಳು ಅತ್ಯುತ್ತಮ ನಿರ್ವಹಣೆ ತೋರಿದ್ದಾರೆ.
ಈ ಚಾಂಪಿಯನ್‍ಶಿಪ್‍ನಲ್ಲಿ ಮಂಗಳೂರು ವಿವಿಯನ್ನು ಪ್ರತಿನಿಧಿಸಿದ ಪುರುಷರ ವಿಭಾಗದ ಆರು ಕ್ರೀಡಾಪಟುಗಳು ಹಾಗೂ ಮಹಿಳೆಯರ ವಿಭಾಗದ ಆರು ಕ್ರೀಡಾಪಟುಗಳ ಪೈಕಿ 5 ಮಂದಿ ಆಳ್ವಾಸ್ ಕ್ರೀಡಾಪಟುಗಳಾಗಿದ್ದಾರೆ.
ಪುರುಷರ ವಿಭಾಗದಲ್ಲಿ ದಾಖಲೆಯ 23ಅಂಕಗಳೊಂದಿಗೆ ತಂಡ ಪ್ರಶಸ್ತಿ, ಮಹಿಳೆಯರ ವಿಭಾಗದಲ್ಲಿ 54ಅಂಕಗಳೊಂದಿಗೆ ತೃತೀಯ ತಂಡ ಪ್ರಶಸ್ತಿ ಗಳಿಸುವುದರೊಂದಿಗೆ ಒಟ್ಟು 79ಅಂಕಗಳೊಂದಿಗೆ ಸಮಗ್ರ ಚಾಂಪಿಯನ್ನಾಗೆ ಮಂಗಳೂರು ವಿವಿ ಹೊರ ಹೊಮ್ಮಿದೆ.
ಈ ಎಲ್ಲಾ ಅಂಕಗಳನ್ನು ಆಳ್ವಾಸ್ ಕ್ರೀಡಾಪಟುಗಳೇ ಗಳಿಸಿದ್ದಾರೆ ಎಂಬುದು ಗಮನಾರ್ಹ. ಪುರುಷರ ವಿಭಾಗದಲ್ಲಿ ರಂಜಿತ್ ಪಟೇಲ್, ಕಾಂತಿಲಾಲ್, ರಾಬಿನ್, ಸತೀಶ್ ಯಾದವ್, ಹರಿಭಕ್ಷ್ ಹಾಗೂ ಅನಿಲ್.
ಮಹಿಳೆಯರ ವಿಭಾಗದಲ್ಲಿ ಆರತಿ, ರಿಶೂ, ಜ್ಯೋತಿ, ಚೈತ್ರ ದೇವಾಡಿಗ ಹಾಗೂ ಶೈಲಿ ಸತೀಶ್ ಆಳ್ವಾಸ್ ಕ್ರೀಡಾಪಟುಗಳಾಗಿದ್ದಾರೆ.
ಈ ಕೂಟದಲ್ಲಿ ಅತ್ಯುತ್ತಮ ಸಾಧನೆಯನ್ನು ತೋರಿದ ಕ್ರೀಡಾಪಟುಗಳ ಪೈಕಿ ರಂಜಿತ್ ಪಟೇಲ್ ಹಾಗೂ ಕಾಂತಿಲಾಲ್ ಈಗಾಗಲೇ ಅಂತರಾಷ್ಟ್ರೀಯ ವಿಶ್ವವಿದ್ಯಾನಿಲಯಗಳ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಿದ್ದಾರೆ.