FILM
ಕ್ಷಮಿಸಿ ನನ್ನಿಂದ ತಪ್ಪಾಯ್ತು ಎಂದ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್

ಮುಂಬೈ: ಪಾನ್ ಮಸಾಲ ಬ್ರ್ಯಾಂಡ್ ನಲ್ಲಿ ಕಾಣಿಸಿಕೊಂಡ ಬಳಿಕ ಉಂಟಾದ ಟೀಕೆಗೆ ಅಕ್ಷಯ್ ಕುಮಾರ್ ಇದೀಗ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿ, ಆ ಜಾಹೀರಾತಿನ ಒಪ್ಪಂದ ಕಡಿದುಕೊಳ್ಳುವುದಾಗಿ ಹೇಳಿದ್ದಾರೆ.
ತಾನು ಯಾವುದೇ ತಂಬಾಕು ಉತ್ಪನ್ನಗಳ ಜಾಹಿರಾತು ಮಾಡುವುದಿಲ್ಲ ಎಂದು ಹಿಂದೆ ಪ್ರತಿಜ್ಞೆ ಮಾಡಿದ್ದ ಹಿಂದಿ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ನಂತರ ಪ್ರತಿಜ್ಞೆಯನ್ನು ಮುರಿದು ಇತ್ತೀಚೆಗೆ ಪಾನ್ ಮಸಾಲ್ ಜಾಹಿರಾತೀನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಸಾಮಾಜಿಕ ಮಾಧ್ಯಮ ಬಳಕೆದಾರರು ಅಕ್ಷಯ್ ಕುಮಾರ್ ಅವರ ವಿರುದ್ಧ ತೀವ್ರ ಟೀಕೆಗೈದಿದ್ದರು. ‘ನನ್ನನ್ನು ಕ್ಷಮಿಸಿ’ ಎಂದು ಟ್ವಿಟರ್ ಪೋಸ್ಟ್ ಮೂಲಕ 54 ವರ್ಷದ ನಟ ಅಭಿಮಾನಿಗಳ ಕ್ಷಮೆ ಕೇಳಿದ್ದಾರೆ. ತಂಬಾಕು ಬ್ರಾಂಡ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದ್ದೇನೆ.

ಅದರಿಂದ ಪಡೆದ ಸಂಪೂರ್ಣ ಸಂಭಾವನೆಯನ್ನು ಯೋಗ್ಯ ಉದ್ದೇಶಕ್ಕಾಗಿ ದಾನ ಮಾಡುವುದಾಗಿ ಅವರು ಹೇಳಿದ್ದಾರೆ. ‘ನನ್ನ ಎಲ್ಲಾ ಅಭಿಮಾನಿಗಳು ಮತ್ತು ಹಿತೈಷಿಗಳೇ ನಾನು ನಿಮ್ಮಲ್ಲಿ ಕ್ಷಮೆಯಾಚಿಸಲು ಬಯಸುತ್ತೇನೆ. ಕಳೆದ ಕೆಲವು ದಿನಗಳಿಂದ ನಿಮ್ಮ ಪ್ರತಿಕ್ರಿಯೆಗಳು ನನ್ನನ್ನು ಆಳವಾಗಿ ಪ್ರಭಾವಿಸಿದೆ. ನಾನು ತಂಬಾಕನ್ನು ಎಂದಿಗೂ ಉತ್ತೇಜಿಸಿಲ್ಲ ಮತ್ತು ನಾನು ಜಾಹೀರಾತು ಮಾಡುತ್ತಿರುವ ಬ್ರಾಂಡ್ ಬಗೆಗಿನ ನಿಮ್ಮ ಭಾವನೆಗಳನ್ನು ನಾನು ಗೌರವಿಸುತ್ತೇನೆ’ ಎಂದು ಹೇಳಿದ್ದಾರೆ.