DAKSHINA KANNADA
ನನ್ನ ಮಗನನ್ನು ರೌಡಿಶೀಟರ್ ಅಂತ ಬರೆದ್ರು ಅಂತ ಮಾಧ್ಯಮಗಳ ಮೇಲೆ ಸಿಟ್ಟಾದ ಅಕ್ಷಯ್ ಕಲ್ಲೇಗ ತಂದೆ

ಪುತ್ತೂರು ನವೆಂಬರ್ 10: ಸ್ನೇಹಿತರಿಂದಲೇ ಕೊಲೆಯಾದ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ನಿವಾಸಕ್ಕೆ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ಸಾಂತ್ವಾನ ಹೇಳಿದರು.
ಈ ವೇಳೆ ಅಕ್ಷಯ್ ತಂದೆ ಚಂದ್ರಶೇಖರ್ ಗೆ ಧೈರ್ಯ ತುಂಬಿದರು. ಈ ವೇಳೆ ಮಾತನಾಡಿದ ಅಕ್ಷಯ್ ತಂದೆ ಚಂದ್ರಶೇಖರ್ ಮಗನನ್ನು ಕೊಂದವರಿಗೆ ತಕ್ಕ ಶಿಕ್ಷೆ ಆಗಬೇಕೆಂದು ಕೋಟ ಶ್ರೀನಿವಾಸ್ ಪೂಜಾರಿ ಅವರಲ್ಲಿ ಆಗ್ರಹಿಸಿದರು.

ಬಳಿಕ ಮಾಧ್ಯಮದವರ ಮೇಲೆ ಹರಿಹಾಯ್ದ ಅಕ್ಷಯ್ ತಂದೆ ಚಂದ್ರಶೇಖರ್ಸ ‘ತನ್ನ ಮಗನ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದು, ‘ಆತ ಮಾಡಿದ ಒಳ್ಳೆಯ ಕೆಲಸಗಳ ಬಗ್ಗೆ ಹೇಳುತ್ತಿಲ್ಲ’ ‘ರೌಡಿಶೀಟರ್ ಎಂಬುದನ್ನೆಲ್ಲ ಉಲ್ಲೇಖ ಮಾಡುತ್ತಿರಿ’ ಎಂದು ಮಾಧ್ಯಮದ ಮೇಲೆ ಹರಿಹಾಯ್ದರು.