Connect with us

    LATEST NEWS

    ಮಂಗಳೂರು – ಹೆಬ್ಬಾವಿನ ಹೊಟ್ಟೆಯಲ್ಲಿ ಸಿಕ್ಕ 11 ಏರ್ ಗನ್ ಬುಲೆಟ್

    ಮಂಗಳೂರು ಎಪ್ರಿಲ್ 22: ಮಂಗಳೂರಿನಲ್ಲಿ ಇತ್ತೀಚೆಗೆ ಬೆಕ್ಕೊಂದನ್ನು ನುಂಗಲು ಹೋಗಿ ಪರದಾಡುತ್ತಿದ್ದ ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಏರ್ ಗನ್ ನ ಬುಲ್ಲೆಟ್ ಪತ್ತೆಯಾಗಿದೆ.


    ಮಂಗಳೂರಿನ ಆನೆಗುಂಡಿ ಬಳಿ ಹೆಬ್ಟಾವೊಂದು ಪರ್ಶಿಯನ್‌ ಬೆಕ್ಕನ್ನು ತಿಂದು ನುಂಗಲಾರದೆ ಒದ್ದಾಡುತ್ತಿತ್ತು, ಇದನ್ನು ಗಮನಿಸಿದ ಸ್ಥಳೀಯರು ಉರಗ ತಜ್ಞರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಭುವನ್‌ ದೇವಾಡಿಗ ಸ್ಥಳಕ್ಕೆ ಆಗಮಿಸಿ, ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದರು. ಬಳಿಕ ಬಲೆ ತೆರವು ಮಾಡಿ ಹೆಬ್ಬಾವು ರಕ್ಷಿಸಲಾಯಿತು.

    ಪಶುವೈದ್ಯ ಡಾ| ಯಶಸ್ವಿ ಅವರಲ್ಲಿ ಹೆಬ್ಬಾವಿಗೆ ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗೆಂದು ಎಕ್ಸ್‌ರೇ ಮಾಡಿಸಿದಾಗ ದೇಹದಲ್ಲಿ 11 ಏರ್‌ ಬುಲ್ಲೆಟ್‌ ಪತ್ತೆಯಾಯಿತು. ಸುಮಾರು ವರ್ಷಗಳ ಹಿಂದೆಯೇ ಈ ಹೆಬ್ಟಾವಿಗೆ ಏರ್‌ಗನ್‌ನಿಂದ ಶೂಟ್‌ ಮಾಡಿರಬಹುದು. ಇದೇ ಕಾರಣಕ್ಕೆ ಕೆಲವೊಂದು ಬುಲೆಟ್‌ಗಳ ಮೇಲೆ ಚರ್ಮ ಬೆಳೆದಿತ್ತು. ಎರಡು ಬುಲ್ಲೆಟ್‌ಗಳನ್ನು ಸದ್ಯ ಹೊರತೆಗೆಯಲಾಗಿದೆ. ಹೆಬ್ಬಾವು ಚೇತರಿಸಿಕೊಳ್ಳುತ್ತಿದೆ.

    Share Information
    Advertisement
    Click to comment

    You must be logged in to post a comment Login

    Leave a Reply