DAKSHINA KANNADA
ಈಸಿ ಆಯುರ್ವೇದ ಮತ್ತು ಮಾಧವ್‌ಬಾಗ್ ಮಧ್ಯೆ ಒಪ್ಪಂದ

ಮಂಗಳೂರು, ನವೆಂಬರ್ 02: ಭಾರತದ ಪ್ರಾಚೀನ ಆರೋಗ್ಯ ವ್ಯವಸ್ಥೆಯನ್ನು ಜಾಗತಿಕ ಮಟ್ಟದಲ್ಲಿ ಹೆಸರುವಾಸಿ ಮಾಡುವ ಪ್ರಯತ್ನದ ಭಾಗವಾಗಿ, ಕಳೆದ 13 ವರ್ಷಗಳಿಂದ ಆಯುರ್ವೇದ ಜ್ಞಾನ ಹಂಚುತ್ತಿರುವ ವಿಶ್ವಾಸಾರ್ಹ ಆನ್‌ಲೈನ್ ವೇದಿಕೆಯಾದ “ಈಸಿ ಆಯುರ್ವೇದ” ವೈಜ್ಞಾನಿಕ ಆಯುರ್ವೇದ ಚಿಕಿತ್ಸೆಗಳ ಮೂಲಕ ಹೃದಯದ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ಸಂಸ್ಥೆ ಮಾಧವ್‌ಬಾಗ್ ನೊಂದಿಗೆ ದೀರ್ಘಾವಧಿಯ ಕಾರ್ಯತಂತ್ರದ ಮೈತ್ರಿಯನ್ನು ರೂಪಿಸಿದೆ.
ಜಂಟಿ ಉದ್ಯಮವು ತಮ್ಮದೇ ಆದ ವರ್ಚುವಲ್ ಕ್ಲಿನಿಕ್‌ಗಳನ್ನು ರಚಿಸುವ ಮೂಲಕ ಆಯುರ್ವೇದ ವೈದ್ಯರಿಗಾಗಿ ಟೆಲಿಮೆಡಿಸಿನ್ ವೇದಿಕೆಯನ್ನು ಅಭಿವೃದ್ಧಿಪಡಿಸಲು ಯೋಜಿಸಿದೆ. ಮುಂದಿನ ಎರಡು ವರ್ಷಗಳಲ್ಲಿ ಜಗತ್ತಿನಾದ್ಯಂತ ಆಯುರ್ವೇದ ವೈದ್ಯರಿಗಾಗಿ 10,000 ವರ್ಚುವಲ್ ಟೆಲಿಮೆಡಿಸಿನ್ ಕ್ಲಿನಿಕ್‌ಗಳನ್ನು ರಚಿಸುವ ಯೋಜನೆ ಇದೆ. ಇದರಿಂದ ಪ್ರಪಂಚದಾದ್ಯಂತದ ಆಯುರ್ವೇದದ ಸುಜ್ಞಾನ ಪಸರಿಸಲು, ಆಯುರ್ವೇದ ವೈದ್ಯರಿಗೆ ಕಲಿಕಾ ಕೋರ್ಸ್‌ಗಳು ಮತ್ತು ಕೌಶಲ್ಯ ನಿರ್ಮಾಣ ಕೋರ್ಸ್‌ಗಳನ್ನು ಪ್ರಾರಂಭಿಸಲು ಯೋಜಿಸಿದೆ.

“ನಮ್ಮ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರ ಅಂತರರಾಷ್ಟ್ರೀಯ ಯೋಗ ದಿನ, ಅಂತರರಾಷ್ಟ್ರೀಯ ಆಯುರ್ವೇದ ದಿನ ಮತ್ತು ಇತರ ಯೋಜನೆಗಳಂತಹ ಹಲವಾರು ಉಪಕ್ರಮಗಳಿಂದ ಆಯುರ್ವೇದವು ಈಗ ಜಾಗತಿಕ ಬ್ರಾಂಡ್ ಆಗುತ್ತಿದೆ. ಆಯುರ್ವೇದವನ್ನು ವಿಶ್ವಸನೀಯ ಅಂತರಾಷ್ಟ್ರೀಯ ಬ್ರಾಂಡ್ ಆಗಿ ರೂಪಿಸುವುದು ಈಗ ನಮ್ಮ ಜವಾಬ್ದಾರಿಯಾಗಿದ್ದು ಈ ನಿಟ್ಟಿನಲ್ಲಿ ಈಸಿ ಆಯುರ್ವೇದವು ಮಾಧವಬಾಗ್ ನೊಂದಿಗೆ ಕೈಜೋಡಿಸಿದೆ” ಎಂದು ಈಸಿ ಆಯುರ್ವೇದದ ಸಂಸ್ಥಾಪಕ ಡಾ. ಜನಾರ್ಧನ ವಿ. ಹೆಬ್ಬಾರ್ ತಿಳಿಸಿದರು.
“ನಾವು ಅಂತರಾಷ್ಟ್ರೀಯ ಮಟ್ಟದಲ್ಲಿ ಹೃದಯ ಕಾಯಿಲೆಗೆ ನಮ್ಮ ವೈಜ್ಞಾನಿಕ ಪುರಾವೆ ಆಧಾರಿತ ಆಯುರ್ವೇದ ಚಿಕಿತ್ಸೆಗಳನ್ನು ಉತ್ತೇಜಿಸಲು ಯೋಜಿಸುತ್ತಿದ್ದೇವೆ. ಆಯುರ್ವೇದದ ಮೂಲಕ ‘ತಡೆಗಟ್ಟುವ ಹೃದ್ರೋಗ’ವನ್ನು ಜಾಗತಿಕ ಬ್ರ್ಯಾಂಡ್ ಮಾಡಲು ಈಸಿ ಆಯುರ್ವೇದ ಅತ್ಯುತ್ತಮ ವೇದಿಕೆಯಾಗಿದೆ,” ಎಂದು ಮಾಧವ್ ಬಾಗ್ ನ ಸಿ.ಇ.ಒ ಡಾ. ರೋಹಿತ್ ಸಾನೆ ಹೇಳಿದರು.