DAKSHINA KANNADA
ರಮ್ಯಾ ಸಿಮಿಲ್ಯಾರಿಟಿಗೆ ಜಾಲತಾಣದಲ್ಲಿ ಮಂಗಳಾರತಿ

ರಮ್ಯಾ ಸಿಮಿಲ್ಯಾರಿಟಿಗೆ ಜಾಲತಾಣದಲ್ಲಿ ಮಂಗಳಾರತಿ
ಮಂಗಳೂರು,ಸೆಪ್ಟಂಬರ್ 19: ಮಾಜಿ ಸಂಸದೆ ಹಾಗೂ ಚಿತ್ರನಟಿ ರಮ್ಯಾ ತನ್ನ ಫೇಸ್ಬುಕ್ ವಾಲ್ ನಲ್ಲಿ ಹಾಕಿದ ಚಿತ್ರವೊಂದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಕಾಂಗ್ರೇಸ್ ನ ಸೋಶಿಯಲ್ ಮಿಡಿಯಾ ಜವಬ್ದಾರಿ ಹೊತ್ತಿರುವ ರಮ್ಯಾ ತಮ್ಮ ಫೆಸ್ ಬುಕ್ ನಲ್ಲಿ ರಾಹುಲ್ ಗಾಂಧಿ ಹಾಗೂ ಭಾರತ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಯವರ ಚಿತ್ರವನ್ನು ಹಾಕಿ ಇವರಿಬ್ಬರಲ್ಲಿ ವೆತ್ಯಾಸವೇನು ಎಂದು ಚಿತ್ರದ ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಅಲ್ಲದೆ ಇಬ್ಬರೂ ಟೀಕಾಕಾರರ ಟೀಕೆಗೆ ಸಿಲುಕಿದ್ದಾರೆ, ಇಬ್ಬರೂ ಇದೀಗ ಮತ್ತೆ ಅಖಾಡಕ್ಕೆ ಇಳಿದಿದ್ದಾರೆ ಎನ್ನುವ ರೀತಿಯಲ್ಲಿ ಬರೆದಿದ್ದರು.
ರಮ್ಯಾಳ ಈ ರೀತಿಯ ಕಂಪ್ಯಾರಿಸನ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆಯಲ್ಲದೆ, ಈ ಪೋಸ್ಟನ್ನು ಹಾಕಿದ ರಮ್ಯಾಳಿಗೆ ಜಾಲತಾಣದಲ್ಲಿ ಬರಪೂರ ಮಂಗಳಾರತಿಯೂ ಆಗಿದೆ.
ಈ ಎರಡು ಚಿತ್ರಗಳ ಪೋಸ್ಟ್ ಹಾಕಿದ ರಮ್ಯಾಳಿಗೂ, ಹುಚ್ಚ ವೆಂಕಟ್ ಗೂ ಯಾವುದೇ ವೆತ್ಯಾಸವಿಲ್ಲ. ಆದರೆ ಧೋನಿಗೂ, ರಾಹುಲ್ ಗಾಂಧಿಯ ನಡುವೆ ಅಜಗಜಾಂತರ ವ್ಯತ್ಯಾಸವಿದೆ.
ಧೋನಿ ದೇಶಕ್ಕಾಗಿ ವಿಶ್ವಕಪ್ ಗೆಲ್ಲಿಸಿಕೊಟ್ಟರೆ , ರಾಹುಲ್ ಗಾಂಧಿಯ ಸಾಧನೆ ಏನು ಎನ್ನುವ ರೀತಿಯ ಕಮೆಂಟ್ ಗಳೂ ಬರತೊಡಗಿವೆ. ಒಂದೆಡೆ ಸಾಮಾಜಿಕ ಜಾಲತಾಣಿಗರು ರಮ್ಯಾಳ ಈ ಪೋಸ್ಟನ್ನು ಜೋಕಾಗಿ ತೆಗೆದುಕೊಂಡು ರಾಹುಲ್ ಗಾಂಧಿ ಜೊತೆಗೆ ಆಕೆಯನ್ನೂ ಹೀಯಾಳಿಸಿದ್ದರೆ, ಇನ್ನು ಕೆಲವರು ರಾಹುಲ್ ಗಾಂಧಿಯನ್ನು ಮಹೇಂದ್ರ ಸಿಂಗ್ ಧೋನಿಯ ಜೊತೆಗೆ ಸೇರಿಸಿದ್ದಕ್ಕೆ ರಮ್ಯಾ ವಿರುದ್ಧ ಕೆಂಗಣ್ಣೂ ಬೀರಿದ್ದಾರೆ.
ಒಟ್ಟಾರೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಒಂದಿಲ್ಲದೊಂದು ಎಡವಟ್ಟು ಮಾಡಿ ಅಲ್ಲೇ ಮಂಗಳಾರತಿ ಮಾಡಿಕೊಂಡಿರುವ ರಮ್ಯಾ ಇದೀಗ ಮತ್ತೆ ಜಾಲತಾಣಿಗರ ಟೀಕೆಗೆ ಗುರಿಯಾಗಿದ್ದಾರೆ.