FILM
ಡೈವೋರ್ಸ್ ಗಾಸಿಪ್ ಗಳಿಗೆ ಬ್ರೇಕ್ ಹಾಕಿದ ಐಶ್ವರ್ಯಾ ರೈ ಅಭಿಷೇಕ್ ಬಚ್ಚನ್
ಮುಂಬೈ ಡಿಸೆಂಬರ್ 20: ಕಳೆದ ಕೆಲವು ತಿಂಗಳಿನಿಂದ ಭಾರೀ ಸುದ್ದಿಯಲ್ಲಿದ್ದ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ನಡುವಿನ ಡೈವೋರ್ಸ್ ಗಾಸಿಪ್ ಗೆ ಇದೀಗ ಪುಲ್ ಸ್ಟಾಪ್ ಬಿದ್ದಿದೆ. ಈ ವದಂತಿಗೆ ಜೊತೆಯಾಗಿ ಮತ್ತೆ ಕಾಣಿಸಿಕೊಳ್ಳುವ ಮೂಲಕ ವದಂತಿಗೆ ಬ್ರೇಕ್ ಹಾಕಿದ್ದಾರೆ. ಮಗಳು ಆರಾಧ್ಯ ಶಾಲೆಗೆ ಜೊತೆಯಾಗಿ ಐಶ್ವರ್ಯಾ ದಂಪತಿ ಎಂಟ್ರಿ ಕೊಟ್ಟಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ.
ಕಳೆದ ಕೆಲವು ತಿಂಗಳಿನಿಂದ ಐಶ್ವರ್ಯಾ ರೈ ಮತ್ತು ಅಭಿಷೇಕ ಬಚ್ಚನ್ ವಿಚ್ಚೇದನ ಸುದ್ದಿಯಾಗಿತ್ತು, ಐಶ್ವರ್ಯಾ ಬಚ್ಚನ್ ಪ್ಯಾಮಿಲಿಯ ಯಾವುದೇ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳದೇ ಸಪರೇಟ್ ಆಗಿ ಇದ್ದಿದ್ದರು, ಬಹುತೇಕ ಡೈವೋರ್ಸ್ ಹಂತಕ್ಕೆ ಬಂದಿದ್ದಾರೆ ಎಂದು ಸುದ್ದಿಯಾಗಿತ್ತು, ಆದರೆ ಇದೀಗ ಜೋಡಿ ಮತ್ತೆ ಒಂದಾಗಿದ್ದಾರೆ. ಮಗಳ ಶಾಲೆ ಕಾರ್ಯಕ್ರಮದಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.
ಮಗಳು ಆರಾಧ್ಯಳ ಶಾಲೆಯ ಕಾರ್ಯಕ್ರಮಕ್ಕೆ ಬಿಗ್ ಬಿ ಜೊತೆ ಅಭಿಷೇಕ್, ಐಶ್ವರ್ಯಾ ಒಟ್ಟಾಗಿ ತೆರಳಿದ್ದಾರೆ. ಆರಾಧ್ಯ ಧೀರುಭಾಯ್ ಅಂಬಾನಿ ಸ್ಕೂಲ್‌ನಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಶಾಲೆಗೆ ಆಗಮಿಸಿದ್ದ ವೇಳೆ, ಇಬ್ಬರು ನಗು ನಗುತ್ತಾ ಬರುತ್ತಿದ್ದು, ಪತ್ನಿಯನ್ನು ಅಭಿಷೇಕ್ ಕೇರ್ ಮಾಡುತ್ತಿದ್ದ ಪರಿ ಕಂಡು ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಇದು ಪಾಪರಾಜಿಗಳ ಕ್ಯಾಮೆರಾದಲ್ಲಿ ಸೆರೆಯಾಗಿದೆ.