LATEST NEWS
ಮೇ 15 ರ ನಂತರ ಮುಖ್ಯಮಂತ್ರಿ ರೋಡ್ ನಲ್ಲೆ ಇರಬೇಕಾಗುತ್ತೆ- ಓಂ ಪ್ರಕಾಶ್ ಮಾತೂರ್

ಮೇ 15 ರ ನಂತರ ಮುಖ್ಯಮಂತ್ರಿ ರೋಡ್ ನಲ್ಲೆ ಇರಬೇಕಾಗುತ್ತೆ- ಓಂ ಪ್ರಕಾಶ್ ಮಾತೂರ್
ಉಡುಪಿ ಮೇ 6: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರೋಡ್ ಶೋ ಗೆ ಬಿಜೆಪಿ ಲೇವಡಿ ಮಾಡಿದೆ. ಮೇ 15ರ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ರೋಡಲ್ಲೇ ಇರಬೇಕಾಗುತ್ತೆ ಎಂದು ಬಿಜೆಪಿ ಮಧ್ಯಪ್ರದೇಶ ರಾಜ್ಯಸಭಾ ಸದಸ್ಯ ಓಂಪ್ರಕಾಶ ಮಾತೂರ್ ಹೇಳಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕಾಂಗ್ರೇಸ್ ಪಕ್ಷಕ್ಕೆ ಈಗ ರೋಡ್ ಶೋ ಅನಿವಾರ್ಯವಾಗಿದೆ ಎಂದರು. ಯುಪಿಯಲ್ಲೂ ಕಾಂಗ್ರೆಸ್ ಇಂತದ್ದೇ ರೋಡ್ ಶೋ ಮಾಡಿತ್ತು, ಆದರೆ ಎಷ್ಟೇ ರೋಡ್ ಶೋ ಮಾಡಿದರೂ ನಮಗೆ ಚಿಂತೆಯಿಲ್ಲ ಎಂದರು. ಅಖಿಲೇಶ್ – ರಾಹುಲ್ ಗಾಂಧಿ ಸಿಕ್ಕಾಪಟ್ಟೆ ರೋಡ್ ಶೋ ಮಾಡಿದ್ದಾರೆ. ಆದರೆ ಜನ ಮಾತ್ರ ಪ್ರಧಾನಿ ನರೇಂದ್ರ ಮೋದಿ ಅವರ ರಾಲಿಗೆ ಮೆಚುಗ್ಗೆ ನೀಡಿ ಲಕ್ಷಾಂತರ ಜನ ಮೋದಿಯನ್ನು ಬೆಂಬಲಿಸಿದ್ದಾರೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಜನ ಬೆಂಬಲ ಸಿಕ್ಕಿದ್ಗು, ಕರಾವಳಿಯಲ್ಲಿ ಮೋದಿ ಸಮಾವೇಶ ಇತಿಹಾಸ ಸೃಷ್ಟಿ ಮಾಡಿದೆ ಎಂದರು.

ಜಿಗ್ನೇಶ್ ಮೇವಾನಿಯನ್ನು ಮೋದಿ ಲೆವೆಲ್ ಗೆ ತರಬೇಡಿ, ಜಿಗ್ನೇಶ್ ಸಮಾಜವನ್ನು ವಿಭಜಿಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯದ್ದು ಅಭಿವೃದ್ಧಿ ಯ ಮಂತ್ರ, ಜಿಗ್ನೇಶ್, ಹಾರ್ದಿಕ್, ಅಲ್ಪೇಶ್ ಸಮಾಜ ವಿಭಜನೆ ಮಾಡುತ್ತಾರೆ. ಮೋದಿಯನ್ನು ವಿಶ್ವವೇ ನಾಯಕ ಅಂತ ಒಪ್ಪಿಕೊಂಡಿದೆ. ಮೇ 15 ರ ನಂತರ ಜನ ಯಾರ ಬಳಿ ಇದ್ದಾರೆಂದು ಗೊತ್ತಾಗುತ್ತದೆ ಎಂದು ಹೇಳಿದರು.