Connect with us

    DAKSHINA KANNADA

    ಹರಡುತ್ತಿದೆ ಆಫ್ರಿಕಾ ಹಂದಿ ಜ್ವರದ ಸೋಂಕು, ಕೇರಳದಲ್ಲಿ 310 ಹಂದಿಗಳ ಸಂಹಾರ,ಕರ್ನಾಟಕದಲ್ಲಿ ಕಟ್ಟೆಚ್ಚರ..!

    ನವದೆಹಲಿ : ದೇಶದಲ್ಲಿ ಆಫ್ರಿಕನ್ ಹಂದಿ ಜ್ವರ ದ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ಸುಮಾರು 310 ಹಂದಿಗಳನ್ನು ಸಂಹಾರ ಮಾಡಲಾಗಿದೆ. ಕೇಂದ್ರ ಸರಕಾರ ಈ ಮಾಹಿತಿ ಬಿಡುಗಡೆ ಮಾಡಿದೆ.

    ಆಫ್ರಿಕಾ ಹಂದಿ ಜ್ವರ ತ್ರಿಶೂರ್ ಜಿಲ್ಲೆಯ ಮಡಕ್ಕಾತರನ್ ಪಂಚಾಯತ್ ನಲ್ಲಿ ಹರಡಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಪಶು ಸಂಗೋಪನೆ ಇಲಾಖೆ ಕಾರ್ಯ ಪ್ರವೃತ್ತವಾಗಿದೆ ಎಂದಿದೆ. ಆಫ್ರಿಕಾ ಹಂದಿ ಜ್ವರ ಹರಡಿದ ಕೇಂದ್ರದಿಂದ 1 ಕಿ.ಮೀ. ವ್ಯಾಪ್ತಿಯಲ್ಲಿರುವ ಹಂದಿಗಳನ್ನು ಕೊಲ್ಲಲು ಹಾಗೂ ವಿಲೇವಾರಿ ಮಾಡಲು ಕ್ಷಿಪ್ರ ನಿರ್ವಹಣಾ ತಂಡವನ್ನು ಜುಲೈ 5ರಂದು ನಿಯೋಜಿಸಲಾಗಿದೆ ಎಂದು ಕೇಂದ್ರ ಮೀನುಗಾರಿಕೆ, ಪಶು ಸಂಗೋಪನೆ ಹಾಗೂ ಹೈನುಗಾರಿಕೆ ಸಚಿವಾಲಯದ ಹೇಳಿಕೆ ತಿಳಿಸಿದೆ. ಆಫ್ರಿಕಾ ಹಂದಿ ಜ್ವರ 2020 ಮೇಯಲ್ಲಿ ಈಶಾನ್ಯ ರಾಜ್ಯಗಳಾದ ಅಸ್ಸಾಂ ಹಾಗೂ ಅರುಣಾಚಲಪ್ರದೇಶದಲ್ಲಿ ಕಾಣಿಸಿಕೊಂಡಿತ್ತು. ಅನಂತರ ಈಗ ಕೇರಳದಲ್ಲಿ ಕಾಣಿಸಿಕೊಂಡಿದ್ದು ನೆರೆ ರಾಜ್ಯವಾಗಿದ್ದರಿಂದ ಕರ್ನಾಟಕದಲ್ಲಿ ಕಟ್ಟೆಚ್ಚರ ವಹಿಸಲಾಗುತ್ತಿದೆ.

    Share Information
    Advertisement
    Click to comment

    You must be logged in to post a comment Login

    Leave a Reply