LATEST NEWS
ವಿಮಾನದ ಟೈರ್ ಹಿಡಿದು ತಪ್ಪಿಸಿಕೊಳ್ಳಲು ಹೊರಟ ಜನರು..ಟೇಕಾಪ್ ಆದ ಬಳಿಕ ಕೆಳಗೆ ಬಿದ್ದು ಸಾವು

ಕಾಬೂಲ್ ಅಗಸ್ಟ್ 16: ಅಪ್ಘಾನಿಸ್ಥಾನದ ಪರಿಸ್ಥಿತಿ ಉಹಿಸಲು ಅಸಾಧ್ಯವಾಗಿದ್ದು, ಜನರು ತಮ್ಮ ಜೀವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಿಕ್ಕ ಸಿಕ್ಕ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾರೆ. ಟೇಕಾಪ್ ಗೆ ರೆಡಿಯಾಗಿದ್ದ ಅಮೇರಿಕಾದ ಯುದ್ದ ವಿಮಾನದಲ್ಲಿ ಜನರು ಹತ್ತಿಕೊಳ್ಳಲು ಪ್ರಯತ್ನಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮತ್ತೊಂದು ವಿಡಿಯೋದಲ್ಲಿ ಟೇಕಾಪ್ ಅದೇ ವಿಮಾನದಿಂದ ಇಬ್ಬರು ಕೆಳಗೆ ಬಿದ್ದು ಸಾವನಪ್ಪಿದ್ದಾರೆ.
ಜೀವ ಉಳಿಸಿಕೊಳ್ಳಲು ಅಮೇರಿಕಾದ ಯುದ್ದ ವಿಮಾನದ ಟೈರ್ ಸಮೀಪದ ಹಿಡಿಕೆಗೆ ಕಟ್ಟಿಕೊಂಡಿದ್ದ ಈ ಪ್ರಯಾಣಿಕರು ವಿಮಾನ ಟೇಕಾಫ್ ಆದ ನಿಮಿಷಗಳ ಬಳಿಕ ಕೆಳಗೆ ಬಿದ್ದರು. ಈ ವಿಮಾನವು ಕಾಬೂಲ್‌ನಿಂದ ಅಮೆರಿಕಕ್ಕೆ ತೆರಳುತ್ತಿತ್ತು.
ಇರಾನ್ನ ಸುದ್ದಿಸಂಸ್ಥೆ ತೆಹ್ರಾನ್ ಟೈಮ್ಸ್ ಮೊದಲ ಬಾರಿಗೆ ಈ ವಿಡಿಯೊ ಟ್ವೀಟ್ ಮಾಡಿತ್ತು. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಇವರಿಬ್ಬರೂ ಕೆಳಗೆ ಬಿದ್ದಿದ್ದಾರೆ.

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ತಾಲೀಬಾನ್ ಉಗ್ರರ ವಶಕ್ಕೆ ಬರುತ್ತಿದ್ದಂತೆ ಅಲ್ಲಿನ ಜನರಲ್ಲಿ ಆತಂಕ ಶುರುವಾಗಿದೆ. ಸಾವಿರಾರು ಜನರು ದೇಶಬಿಟ್ಟು ಹೊರಗೆ ಹೋಗುವ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ವಿಮಾನ ನಿಲ್ದಾಣದಲ್ಲಿ ಜನಸಂದಣಿ ಹೆಚ್ಚಾಗಿದ್ದು, ನೂಕಾಟ-ತಳ್ಳಾಟ ಸಾಮಾನ್ಯ ಎನಿಸಿದೆ. ಜನರನ್ನು ನಿಯಂತ್ರಿಸಲು ಅಮೆರಿಕ ಸೇನಾಪಡೆಗಳು ಗಾಳಿಯಲ್ಲಿ ಗುಂಡು ಹಾರಿಸಿವೆ.