LATEST NEWS
ಪ್ಯಾನ್ ಆಧಾರ್ ಲಿಂಕ್ ಜೂನ್ 30 ರವರೆಗೆ ವಿಸ್ತರಣೆ..1000 ರೂಪಾಯಿ ದಂಡವೂ ಇದೆ…!!

ನವದೆಹಲಿ ಮಾರ್ಚ್ 28:ಪ್ಯಾನ್ ಕಾರ್ಡ್ ಮತ್ತು ಆಧಾರ ಕಾರ್ಡ್ ಜೊತೆ ಜೋಡಣೆಗೆ ಕೇಂದ್ರ ಸರಕಾರ ಮತ್ತೆ ಮೂರು ತಿಂಗಳು ಅಂದರೆ ಜೂನ್ 30 ರವರೆಗೆ ಅವಧಿ ವಿಸ್ತರಿಸಿ ಅವಕಾಶ ನೀಡಿದೆ. ಆದರೆ 1000 ಪಾವತಿಯನ್ನು ಮಾತ್ರ ಹಾಗೆ ಮುಂದುವರೆಸಿದೆ.
ಪ್ಯಾನ್ ಜೊತೆಗೆ ಆಧಾರ್ ಲಿಂಕ್‌ಗೆ ಇದೇ ತಿಂಗಳ ಮಾರ್ಚ್ 31 ಕೊನೆ ದಿನವಾಗಿತ್ತು. ಈ ಅವಧಿಯನ್ನು ವಿಸ್ತರಿಸಲಾಗಿದೆ. 2023ರ ಜೂನ್ 30 ರ ವರೆಗೆ ಅವಧಿ ವಿಸ್ತರಿಸಲಾಗಿದೆ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಹೊಂದಿರುವುದನ್ನು ತಪ್ಪಿಸುವ ಉದ್ದೇಶದಿಂದ ಆಧಾರ್ ಜೊತೆಗೆ ಪ್ಯಾನ್ ಲಿಂಕ್ ಮಾಡಿಸಬೇಕು ಎಂದು ಆದೇಶ ಹೊರಡಿಸಲಾಗಿತ್ತು. ಲಿಂಕ್ ಮಾಡಿಸಲು ಮಾರ್ಚ್31 ಕೊನೆ ದಿನವಾಗಿತ್ತು. ಇದಕ್ಕೆ ಜನಾಕ್ರೋಶ ವ್ಯಕ್ತವಾದ ಬೆನ್ನಲ್ಲೆ ಗಡುವು ಮೂರು ತಿಂಗಳವರೆಗೆ ವಿಸ್ತರಣೆ ಮಾಡಲಾಗಿದೆ. ಆದರೆ 1000 ರೂಪಾಯಿ ದಂಡ ಮಾತ್ರ ಕಟ್ಟಲೇಬೇಕಾಗಿದೆ.