LATEST NEWS
500 ರೂಪಾಯಿಗೆ ಆಧಾರ್ ಮಾಹಿತಿ ಸೇಲ್
500 ರೂಪಾಯಿಗೆ ಆಧಾರ್ ಮಾಹಿತಿ ಸೇಲ್
ಜಲಂದರ್ ಜನವರಿ 4: ಕೇವಲ 500 ರೂಪಾಯಿ ನೀಡಿದರೆ 10 ನಿಮಿಷ ನೀವು ಕೋಟ್ಯಾಂತರ ಜನರ ಆಧಾರ ಕಾರ್ಡ್ ನ ಮಾಹಿತಿಯನ್ನು ನೋಡಬಹುದು, 300 ರೂಪಾಯಿ ಕೊಟ್ಟರೆ ನೀವು ಯಾವುದೇ ವ್ಯಕ್ತಿಯ ಆಧಾರ್ ಕಾರ್ಡ ಪ್ರಿಂಟ್ ತೆಗೆದುಕೊಳ್ಳಬಹುದಾಗಿದೆ. ಆಧಾರ ಮಾಹಿತಿ ಈ ರೀತಿಯಾಗಿ ಬೇಕಾಬಿಟ್ಟಿಯಾಗುವ ಸಿಗುತ್ತಿದೆ ಎಂದು ದಿ ಟ್ರಿಬ್ಯೂನ್ ವೆಬ್ ಸೈಟ್ ವರದಿ ಮಾಡಿದ್ದು, ಆಧಾರ್ ಕಾರ್ಡ್ ನ ಮಾಹಿತಿಯ ಸುರಕ್ಷತೆಯ ಬಗ್ಗೆ ಈಗ ಪ್ರಶ್ನೆ ಎದ್ದಿದೆ.
ದಿ ಟ್ರಿಬ್ಯೂನ್ ವೆಬ್ ಸೈಟ್ ಒಂದು ತನಿಖಾ ವರದಿಯನ್ನು ಪ್ರಕಟಿಸಿದ್ದು ಅದರಲ್ಲಿ ಆಧಾರ್ ಕಾರ್ಡ್ ನ ದತ್ತಾಂಶಗಳಿಗೆ ಯಾವುದೇ ಸುರಕ್ಷತೆ ಇಲ್ಲ ಎನ್ನುವುದನ್ನು ಸಾಭೀತು ಪಡಿಸಿದೆ. ಯಾರು ಬೇಕಾದರೂ ದೇಶದ ಕೋಟ್ಯಾಂತರ ಜನರ ಆಧಾರ ಮಾಹಿತಿಯನ್ನು ಪಡೆಯಲು ಸಾಧ್ಯ ಎನ್ನುವುದು ಸಾಭಿತು ಪಡಿಸಿದೆ.
ಸೋಶಿಯಲ್ ಮಿಡಿಯಾ ವಾಟ್ಸ್ ಅಫ್ ನ ಒಂದು ಗ್ರೂಪ್ ಈ ಕ್ರಿಯೆಯಲ್ಲಿ ಸಕ್ರಿಯವಾಗಿದ್ದು, ಇದು ಕೇವಲ 500 ರೂಪಾಯಿ ಕೊಟ್ಟರೆ ನಿಮಗೆ 10 ನಿಮಿಷ ಆಧಾರ್ ಸರ್ವರ್ ನ ಲಾಗಿನ್ ಐಡಿ ಮತ್ತು ಪಾಸ್ ವರ್ಡ್ ನ್ನು ನಿಮಗೆ ನೀಡುತ್ತದೆ. ಈ ಮಾಹಿತಿಯಿಂದ ನೀವು ಆಧಾರ್ ವೆಬ್ ಸೈಟ್ ಲಾಗಿನ್ ಆಗಿ ನೀವು ಯಾವುದೇ ವ್ಯಕ್ತಿಯ ಆಧಾರ್ ನಂಬರ್ ಹಾಕಿದರೆ ಅವರ ಸಂಪೂರ್ಣ ಮಾಹಿತಿ ನಿಮ್ಮ ಮುಂದೆ ಬರುತ್ತದೆ. ಅಲ್ಲದೇ ಮತ್ತೆ 300 ರೂಪಾಯಿ ನೀಡಿದರೆ ನಿಮಗೆ ಸಾಪ್ಟವೇರ್ ಒಂದನ್ನು ನೀಡಲಾಗುತ್ತದೆ. ಅದರ ಮೂಲಕ ನೀವು ಯಾವುದೇ ವ್ಯಕ್ತಿಯ ಆಧಾರ್ ಕಾರ್ಡ್ ನ್ನು ಪ್ರಿಂಟ್ ಮಾಡಿಕೊಳ್ಳಬಹುದಾಗಿದೆ.
ಈ ಮೂಲಕ ಆಧಾರ ಮಾಹಿತಿಗಳು ಸರಕ್ಷಿತಲ್ಲ ಎನ್ನುವುದು ಸಾಭೀತಾಗಿದೆ. ಆದರೆ ಕೇಂದ್ರ ಸರಕಾರ ಇತ್ತೀಚೆಗೆ ಆಧಾರ್ ಮಾಹಿತಿಗಳು ಸೋರಿಕೆಯಾಗಿಲ್ಲ ಎಂದು ಹೇಳಿಕೆ ನೀಡಿತ್ತು. ಅಲ್ಲದೆ ಆಧಾರ್ ಮಾಹಿತಿಗಳು ಸಂಪೂರ್ಣ ಸುರಕ್ಷಿತ ಎಂದು ಹೇಳಿಕೆ ನೀಡಿತ್ತು. ಆದರೆ ದಿ ಟ್ರಿಬ್ಯೂನ್ ವೆಬ್ ಸೈಟ್ ವರದಿಯ ಪ್ರಕಾರ ಆಧಾರ್ ಮಾಹಿತಿಯ ಸುರಕ್ಷತೆಯ ಬಗ್ಗೆ ಪ್ರಶ್ನೆ ಎದ್ದಿದೆ.