Connect with us

LATEST NEWS

ಅದಮಾರು ಮಠದ ಸಮಸ್ತ ಜವಬ್ದಾರಿ ಕಿರಿಯ ಶ್ರೀ ಈಶಪ್ರಿಯರಿಗೆ ಹಸ್ತಾಂತರ

ಅದಮಾರು ಮಠದ ಸಮಸ್ತ ಜವಬ್ದಾರಿ ಕಿರಿಯ ಶ್ರೀ ಈಶಪ್ರಿಯರಿಗೆ ಹಸ್ತಾಂತರ

ಉಡುಪಿ ನವೆಂಬರ್ 10: ಉಡುಪಿಯ ಅಷ್ಠಮಠಗಳಲ್ಲಿ ಒಂದಾದ ಅದಮಾರು ಮಠದ ಸಮಸ್ತ ಜವಬ್ದಾರಿಯನ್ನು ಕಿರಿಯ ಶ್ರೀ ಈಶಪ್ರಿಯರಿಗೆ ಮಠಾಧೀಶ ಅದಮಾರು ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹಸ್ತಾಂತರಿಸಿದ್ದಾರೆ.

ಈ ಕುರಿತಂತೆ ಹೇಳಿಕೆ ನೀಡಿರುವ ಅದಮಾರು ಮಠಾಧೀಶ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ನನಗೆ ಜವಾಬ್ದಾರಿ ಬಹಳ ಹಗುರವಾಗುತ್ತಿದೆ. ಕಿರಿಯ ಸ್ವಾಮಿಜಿಗಳಾದ ಈಶಪ್ರಿಯರಿಗೆ ವೈದಿಕ ವಿದ್ಯೆಯ ಜೊತೆ ಲೌಕಿಕ ವಿದ್ಯೆ ಇದೆ, ಅಲ್ಲದೆ ಕಿರಿಯಶ್ರೀಗಳಿಗೆ ಒಳ್ಳೆಯ ತಿಳುವಳಿಕೆ ಇದೆ. ಈ ಹಿನ್ನಲೆಯಲ್ಲಿ ಅದಮಾರು ಮಠದ ಸಮಸ್ತ ಜವಾಬ್ದಾರಿ ವಹಿಸಿಕೊಡುತ್ತೇನೆ. ಅದಮಾರು ಸಂಸ್ಥಾನ ಚೆನ್ನಾಗಿ ನಿಭಾಯಿಸುತ್ತಾರೆ ಎಂಬ ನಂಬಿಕೆ ಇದೆ. ನಾನು ನಿರಾಳವಾಗಿ ಇರಲು ಇಚ್ಚಿಸುತ್ತೇನೆ ಎಂದು ಹೇಳಿದ್ದಾರೆ.

ನಾನು ಪೀಠದಲ್ಲಿ ಇದ್ದು ಕಿರಿಯಶ್ರೀಗೆ ಸಹಕರಿಸುತ್ತೇನೆ. ಮುಂದಿನ ಪರ್ಯಾಯ ಯಾರು ಅಂತ ನಿರ್ಧಾರ ಮಾಡಿಲ್ಲ. ಶಿಕ್ಷಣ ಸಂಸ್ಥೆ ಬಗ್ಗೆ ನಾವು ನೋಡಿಕೊಳ್ಳುತ್ತೇವೆ. ಹಣಕಾಸು, ಪೂಜೆ, ಮಂತ್ರಾಕ್ಷತೆ ಕೊಡುವ ಜವಾಬ್ದಾರಿ ಕಿರಿಯಶ್ರೀಗಳಿಗೆ ವಹಿಸಿಕೊಡಲಿದ್ದೆನೆ ಎಂದು ಹೇಳಿದರು.

ನಮ್ಮ ಶಿಷ್ಯರು ಪೀಠವನ್ನು ಚೆನ್ನಾಗಿ ನಿಭಾಯಿಸಲಿದ್ದಾರೆ. ಮುಂದಿನ ಪರ್ಯಾಯದಲ್ಲಿ ಕಿರಿಯ ಶ್ರೀ ನಮಗೆ ಸಹಕರಿಸಲಿದ್ದಾರೆ ಎಂದು ಹೇಳಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *