FILM
ಆಹಾರವೇ ಮುಖ್ಯ….ಸೆಕ್ಸ್ ಇಲ್ಲದಿದ್ದರೇ ನಾವೇನು ಸಾಯೋದಿಲ್ಲ – ನಟಿ ಶೃುತಿ ಹಾಸನ್

ಹೈದರಾಬಾದ್: ಬಹುಭಾಷಾ ನಟಿ ಶೃುತಿ ಹಾಸನ್ ತಮ್ಮ ಬೋಲ್ಡ್ ಹೇಳಿಕೆಗಳ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ತಮಿಳು, ತೆಲುಗು ಹಿಂದಿಯಲ್ಲಿ ಬಹುಬೇಡಿಕೆಯ ನಟಿಯಾಗಿರುವ ಅವರು ಇತ್ತೀಚೆಗೆ ಮಾಧ್ಯಮವೊಂದರ ಸಂದರ್ಶನದಲ್ಲಿ ನೀಡಿರುವ ಒಂದು ಹೇಳಿಕೆ ಸದ್ಯ ಹಾಟ್ ಟಾಫಿಕ್ ಆಗಿದೆ.
ನಟಿ ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಆಹಾರ ಮತ್ತು ಸೆಕ್ಸ್ ಕುರಿತಂತೆ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ. ಫಟಾಫಟ್ ಪ್ರಶ್ನೆಗಳ ಸುತ್ತಿನಲ್ಲಿ ಸಂದರ್ಶಕರು ಆಹಾರ ಮತ್ತು ಸೆಕ್ಸ್ ಇವುಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೀರಾ ಎಂಬ ಪ್ರಶ್ನೆಯನ್ನು ಕೇಳಿದ್ದರು.

ಇದಕ್ಕೆ ಉತ್ತರಿಸಿದ ಶ್ರುತಿ, ಆಹಾರ ಮತ್ತು ಸೆಕ್ಸ್ ಅನ್ನು ಹೋಲಿಕೆ ಮಾಡಲು ಸಾಧ್ಯವೆ? ಎಂದು ಮರು ಪ್ರಶ್ನೆ ಹಾಕಿದರು. ಬಳಿಕ, ನಾವು ಆಹಾರ ಇಲ್ಲದಿದ್ದರೆ ಬದುಕಲು ಸಾಧ್ಯವಿಲ್ಲ, ಆದರೆ ಸೆಕ್ಸ್ ಮಾಡದಿದ್ದರೂ ಬದುಕಬಹುದು ಎಂದು ಶ್ರುತಿ ಹೇಳಿದರು.