Connect with us

    FILM

    250 ಕೋಟಿ ಸಾಲದ ಸುಳಿಯಲ್ಲಿ ನಟಿ ರಕುಲ್ ಪ್ರೀತ್ ಸಿಂಗ್ ಪತಿ

    ಮುಂಬೈ ಜೂನ್ 24: ಇತ್ತೀಚೆಗಷ್ಟೇ ಮದುವೆಯಾದ ಬಾಲಿವುಡ್ ಬೆಡಗಿ ರಕುಲ್ ಪ್ರೀತ್ ಸಿಂಗ್ ಪತಿ ಜಾಕಿ ಭಗ್ನಾನಿ ಕುಟುಂಬ ಬರೋಬ್ಬರಿ 250 ಕೋಟಿ ಸಾಲದ ಸುಳಿಯಲ್ಲಿ ಸಿಲುಕಿದ್ದು. ಮದುವೆಯಾಗಿ ಜಾಕಿ ಮನೆಗೆ ಕಾಲಿಟ್ಟ ಬೆನ್ನಲ್ಲೇ ನಟಿಯ ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದೆ.


    ನಟಿ ರಕುಲ್ ಮಾವ ವಶು ಭಗ್ನಾನಿ ನೇತೃತ್ವದ ಪೂಜಾ ಎಂಟೈನ್‌ಮೆಂಟ್ ಸಂಸ್ಥೆ ಅಡಿ ಕಳೆದ 30 ವರ್ಷಗಳಿಂದ ಸಾಕಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡುತ್ತಾ ಬಂದಿದೆ. ಸಾಕಷ್ಟು ಹಿಟ್ ಸಿನಿಮಾಗಳನ್ನು ಕೊಟ್ಟಿದೆ. ಆದರೆ ಇತ್ತೀಚೆಗೆ ನಿರ್ಮಾಣ ಮಾಡಿದ 2 ಸಿನಿಮಾಗಳಿಂದ ಭಗ್ನಾನಿ ಕುಟುಂಬಕ್ಕೆ ನಷ್ಟವಾಗಿದೆ.

    ಕಳೆದ ವರ್ಷ ಅಕ್ಟೋಬರ್‌ನಲ್ಲಿ ತೆರೆಕಂಡ ‘ಗಣಪತ್’ ಸಿನಿಮಾ ಇತ್ತೀಚೆಗೆ ತೆರೆಕಂಡ ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾ.ಪ್ಲಾಪ್ ಆಗಿದ್ದು, ಈ ಪರಿಣಾಮ, ಭಗ್ನಾನಿ ಕುಟುಂಬವು ಈಗ ಸಂಕಷ್ಟ ಎದುರಿಸುತ್ತಿದೆ. ಅದಕ್ಕಾಗಿ ಪೂಜಾ ಎಂಟೈನ್‌ಮೆಂಟ್ ಸಂಸ್ಥೆಯ 7 ಅಂತಸ್ತಿನ ಕಚೇರಿಯನ್ನೇ ಮಾರಲಾಗಿದೆ ಎಂದು ವರದಿಯಾಗಿದ್ದು, ಅಲ್ಲದೆ 80% ಉದ್ಯೋಗಿಗಳನ್ನು ಮನೆಗೆ ಕಳುಹಿಸಲಾಗಿದೆ. ಇದುವರೆಗೂ ಮಾಡಿದ ಕೆಲಸಕ್ಕೆ 2 ತಿಂಗಳಿನಿಂದ ಉದ್ಯೋಗಿಗಳಿಗೆ ಸರಿಯಾದ ಸಂಬಳ ನೀಡಿಲ್ಲ. ಇದರಿಂದ ನೌಕರರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಗೆ ಹಾಕಿದ್ದಾರೆ. ಭಗ್ನಾನಿ ಕುಟುಂಬದ ವಿರುದ್ಧ ತಿರುಗಿ ಬಿದ್ದಿದ್ದಾರೆ

    Share Information
    Advertisement
    Click to comment

    You must be logged in to post a comment Login

    Leave a Reply