Connect with us

    FILM

    ಮಧುರೈ ಮೀನಾಕ್ಷಿ ದೇವಸ್ಥಾನದಲ್ಲಿ ನಟಿ ನಮಿತಾಗೆ ಜಾತಿ ಸರ್ಟಿಫಿಕೇಟ್ ಕೇಳಿದ ಸಿಬ್ಬಂದಿ

    ಚನ್ನೈ ಅಗಸ್ಟ್ 27: ಖ್ಯಾತ ನಟಿ ನಮಿತಾ ಅವರಿಗೆ ಮಧುರೈನ ಮೀನಾಕ್ಷಿ ದೇವಾಲಯದಲ್ಲಿ ಹಿಂದೂ ಎಂದು ಪ್ರೂವ್ ಮಾಡಲು ಜಾತಿ ಸರ್ಟಿಫಿಕೇಟ್ ಕೇಳಿದ ಘಟನೆ ನಡೆದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಮಗಾದ ಅವಮಾನದ ಬಗ್ಗೆ ನಟಿ ನಮಿತಾ ಹೇಳಿಕೆ ನೀಡಿದ್ದಾರೆ.


    ಶ್ರೀಕೃಷ್ಣ ಜನ್ಮಾಷ್ಠಮಿ ಹಿನ್ನಲೆ ನಮಿತಾ ತಮ್ಮ ಪತಿ ವೀರೇಂದ್ರ ಚೌಧರಿ ಜೊತೆ ದೇವಸ್ಥಾನಕ್ಕೆ ತೆರಳಿದ್ದರು ಈ ವೇಳೆ ದೇವಸ್ಥಾನದ ಸಿಬ್ಬಂದಿ ನಮಿತಾ ಅವರನ್ನು ದೇವಸ್ಥಾನದ ಬಾಗಿಲಲ್ಲಿ ನಿಲ್ಲಿಸಿ ಜಾತಿ ಪ್ರಮಾಣಪತ್ರ ಕೇಳಲಾಗಿದೆ. ‘ನೀವು ಹಿಂದೂ ಎಂಬುದುನ್ನು ಸಾಬೀತು ಮಾಡಿ. ಜಾತಿ ಪ್ರಮಾಣಪತ್ರ ನೀಡಿ’ ಎಂದು ದೇವಸ್ಥಾನದ ಸಿಬ್ಬಂದಿ ಕೇಳಿದ್ದಾರೆ ಅಂತ ನಮಿತಾ ಮತ್ತು ವೀರೇಂದ್ರ ಹೇಳಿದ್ದಾರೆ.

    ನಮಿತಾ ಮತ್ತು ಅವರ ಪತಿ ವೀರೇಂದ್ರ ಚೌಧರಿ ಅವರು ಮಾಸ್ಕ್​ ಧರಿಸಿ ದೇವಸ್ಥಾನಕ್ಕೆ ಹೋಗಿದ್ದರು. ತಾವು ದೇವಸ್ಥಾನಕ್ಕೆ ತೆರಳುವುದರ ಬಗ್ಗೆ ಒಂದು ದಿನ ಮುಂಚೆಯೇ ಸ್ಥಳೀಯ ಪೊಲೀಸರಿಗೆ ತಿಳಿಸಿದ್ದರು. ಜನರು ತಮ್ಮನ್ನು ಗುರುತಿಸಿದರೆ ಜನಜಂಗುಳಿ ಆಗಬಹುದು ಎಂಬ ಕಾರಣದಿಂದ ಅವರು ಮಾಸ್ಕ್​ ಧರಿಸಿದ್ದರು. ದಂಪತಿಯನ್ನು 20 ನಿಮಿಷಗಳ ಕಾಲ ಕಾಯಿಸಿ, ಜಾತಿ ಪ್ರಮಾಣಪತ್ರವನ್ನು ಹೇಳಿದ ಬಳಿಕವೇ ದೇವಸ್ಥಾನದ ಒಳಗೆ ಬಿಡಲಾಗಿದೆ. ‘ಈ ರೀತಿ ಬೇರೆ ಎಲ್ಲಿಯೂ ಆಗಿಲ್ಲ’ ಎಂದು ನಮಿತಾ ಹೇಳಿದ್ದಾರೆ.

    ‘ನಾವು ಹಿಂದೂಗಳು ಎಂಬುದನ್ನು ಸಾಬೀತು ಮಾಡಲು ಪ್ರಮಾಣಪತ್ರ ಕೇಳಿದರು. ಜಾತಿ ಪ್ರಮಾಣಪತ್ರವನ್ನೂ ತೋರಿಸಿ ಎಂದರು. ದೇಶದ ಬೇರೆ ಯಾವುದೇ ದೇವಸ್ಥಾನದಲ್ಲೂ ಇಂಥ ಅನುಮನ ನಮಗೆ ಆಗಿಲ್ಲ. ನಾನು ಹಿಂದೂ ಕುಟುಂಬದಲ್ಲಿ ಹುಟ್ಟಿದವಳು. ನಮ್ಮ ಮದುವೆ ನಡೆದಿದ್ದು ತಿರುಪತಿಯಲ್ಲಿ. ನನ್ನ ಮಕ್ಕಳಿಗೆ ಕೃಷ್ಣನ ಹೆಸರು ಇಟ್ಟಿದ್ದೇವೆ. ಇದನ್ನೆಲ್ಲ ತಿಳಿಸಿದ ನಂತರವೂ ನಮ್ಮ ಜೊತೆ ದೇವಸ್ಥಾನದ ಸಿಬ್ಬಂದಿ ವರಟಾಗಿ ನಡೆದುಕೊಂಡು. ಜಾತಿ ಪ್ರಮಾಣಪತ್ರ ಕೇಳಿದರು’ ಎಂದು ಮಾಧ್ಯಮಗಳ ಎದುರು ನಮಿತಾ ಆ ಘಟನೆಯನ್ನು ವಿವರಿಸಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *