Connect with us

DAKSHINA KANNADA

ಇಂಟರ್‌ನೆಟ್‌ ನಲ್ಲಿ ನಿಲ್ಲುತ್ತಿಲ್ಲ ಪುತ್ತೂರ ಮುತ್ತು ಪಡ್ಡೆಗಳ ಮತ್ತು ‘ಜ್ಯೋತಿ ರೈ’ ಅಂದದ ಹಾವಳಿ..!

ನಟಿ ಜ್ಯೋತಿ ರೈ ಅವರ ಪರಿಚಯ ಮಾಡುವ ಅಗತ್ಯವಿಲ್ಲ. ಎಲ್ಲಾ ಕನ್ನಡಿಗರಿಗೂ ಇವರ ಪರಿಚಯ ಇದೆ. ಮೂಲತಾ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡವರಾಗಿರುವ ಜ್ಯೋತಿ ರೈ ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿರುವ ಸ್ಟಾರ್‌ ನಟಿಯರಲ್ಲಿ ಒಬ್ಬರು.

ಸಹಜ ಸುಂದರಿ ಜ್ಯೋತಿ 1987 ರ ಜುಲೈ 4 ರಂದು  ಜನಿಸಿ ಶಿಕ್ಷಣವನ್ನು ಪುತ್ತೂರಿನಲ್ಲಿ ಮಾಡಿದರು. ಚಿಕ್ಕಂದಿನಿಂದಲೂ ಸಿನಿಮಾದ ಮೇಲಿನ ಆಸಕ್ತಿ ಜ್ಯೋತಿಯವರನ್ನು ನಟನೆಯತ್ತ ಸೆಳೆಯುವಂತೆ ಮಾಡಿತು.

ಹಲವು ಕನ್ನಡ ಧಾರಾವಾಹಿಗಳಲ್ಲಿ ಮತ್ತು ಕನ್ನಡ ಸಿನಿಮಾಗಳಲ್ಲಿ ನಟಿಸಿ ಜನಮನ್ನಣೆ ಗಳಿಸಿರುವ ಜ್ಯೋತಿ ರೈ ಅವರಿಗೆ ಮದುವೆಯಾಗಿ ಒಬ್ಬ ಮಗನಿದ್ದಾನೆ.

ಸರಿ ಸುಮಾರು 20ಕ್ಕು ಹೆಚ್ಚು ಕನ್ನಡ ಧಾರವಾಹಿಗಳಲ್ಲಿ ನಟಿಸಿ ಜನಮನ ಗೆದ್ದಿರುವ ನಟಿ ಈಕೆ. ಇತ್ತೀಚಿಗೆ ಜ್ಯೋತಿ ತಮ್ಮ ಹಾಟ್‌ ಅವತಾರದ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಗಮನಸೆಳೆಯುತ್ತಿದ್ದಾರೆ. ಸಧ್ಯ ನಟಿಯ ಬೋಲ್ಡ್‌ ಚಿತ್ರಗಳು ಇಂಟರ್‌ನೆಟ್‌ನಲ್ಲಿ ಹೈಪ್‌ ಸೃಷ್ಟಿಸುತ್ತಿದೆ. ಸರಿ ಸುಮಾರು 20ಕ್ಕು ಹೆಚ್ಚು ಕನ್ನಡ ಧಾರವಾಹಿಗಳಲ್ಲಿ ನಟಿಸಿ ಜನಮನ ಗೆದ್ದಿರುವ ನಟಿ ಜ್ಯೋತಿ. ಮೂರುಗಂಟು, ಕನ್ಯಾದಾನ, ಅನುರಾಗ ಸಂಗಮ, ಗೆಜ್ಜೆ ಪೂಜೆ, ಕಸ್ತೂರಿ ನಿವಾಸ, ಕಿನ್ನರಿ ಧಾರಾವಾಹಿಗಳ ಮೂಲಕ ಜನಮನ ಸೆಳೆದಿದ್ದಾರೆ. ಸಧ್ಯ ಜ್ಯೋತಿ ತೆಲುಗು ಕಿರುತೆರೆ ಮತ್ತು ವೆಬ್‌ ಸಿರೀಸ್‌, ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಜ್ಯೋತಿ ರೈ ಪ್ರೆಟಿ ಗರ್ಲ್ ಎಂಬ ವೆಬ್ ಸೀರಿಸ್‌ನಲ್ಲಿ ನಟಿಸುತ್ತಿದ್ದಾರೆ.. ಈ ಸಿನಿಮಾದಲ್ಲಿ ಸಖತ್‌ ಬೋಲ್ಡ್‌ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ ಇಷ್ಟು ದಿನ ಅಮ್ಮನ ಪಾತ್ರದಲ್ಲಿ ನಟಿಸುತ್ತಿದ್ದ ನಟಿ ಏಕಾಎಕಿ ಬೊಲ್ಡ್‌ ಲುಕ್‌ನಲ್ಲಿ ಕಾಣಿಸಿಕೊಂಡು ಫ್ಯಾನ್ಸ್‌ಗೆ ಶಾಕ್‌ ನೀಡಿದ್ದಾರೆ.

Share Information
Advertisement
Click to comment

You must be logged in to post a comment Login

Leave a Reply