FILM
ಕಟೀಲು ದೇವಸ್ಥಾನಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದ ನಟ ವಿಜಯ ರಾಘವೇಂದ್ರ

ಮಂಗಳೂರು ಫೆಬ್ರವರಿ 20: ಕಟೀಲು ಶ್ರೀದುರ್ಗಾಪರಮೇಶ್ವರೀ ದೇಗುಲಕ್ಕೆ ಕನ್ನಡದ ಖ್ಯಾತ ನಟ ವಿಜಯರಾಘವೇಂದ್ರ ಕುಟುಂಬ ಸಹಿತ ಶನಿವಾರ ಭೇಟಿ ನೀಡಿ ದೇವರ ದರ್ಶನ ಪಡೆದರು.
ಕುಟುಂಬ ಸಮೇತರಾಗಿ ದೇವಸ್ಥಾನಕ್ಕೆ ಆಗಮಿಸಿದ್ದ ವಿಜಯ ರಾಘವೇಂದ್ರ ಅವರು ದೇವಿಗೆ ಸೀರೆಕಾಣಿಕೆ ಸಮರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು. ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಅವರು ವಿಜಯ ರಾಘವೇಂದ್ರ ದಂಪತಿಗೆ ದೇವರ ಪ್ರಸಾದ ನೀಡಿ ಹರಿಸಿದರು. ಈ ಸಂದರ್ಭ ದೇಗುಲಕ್ಕೆ ಬಂದಿದ್ದ ಭಕ್ತರು, ಶಾಲಾ ವಿದ್ಯಾರ್ಥಿಗಳು ವಿಜಯರಾಘವೇಂದ್ರ ಜೊತೆಗೆ ಸೆಲ್ಫಿ ಪೋಟೊ ತೆಗೆದುಕೊಂಡು ಸಂಭ್ರಮಿಸಿದರು.

ಬಳಿಕ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಅರ್ಚಕ ರಾಮದಾಸ ಆಚಾರ್ಯ ಅನಂತಕೃಷ್ಣ ಆಚಾರ್ಯ, ವ್ಯವಸ್ಥಾಪನಾ ಸಮಿತಿಯ ರವೀಂದ್ರ ಎಚ್ ಶೆಟ್ಟಿ, ರಘುವೀರ ಶೆಣೈ, ರವಿಶಂಕರ ಪೈ ಮತ್ತಿತರರಿದ್ದರು. ಜಾರಿಗೆ ಕಟ್ಟೆ ಕೊರಗಜ್ಜ ಕ್ಷೇತ್ರಕ್ಕೂ ವಿಜಯರಾಘವೇಂದ್ರ ಕುಟುಂಬ ಭೇಟಿ ನೀಡಿ ಪ್ರಸಾದ ಸ್ವೀಕರಿಸಿತು.