Connect with us

    FILM

    ತಮ್ಮ ನಿಶ್ಚಿತಾರ್ಥದ ದಿನವೇ ಕಾರು ಅಪಘಾತದಲ್ಲಿ ನಟ ಸೂರಜ್ ಮೆಹರ್ ಮೃತ್ಯು..!

    ರಾಯ್‌ಪುರ : ಖ್ಯಾತ ನಟ ಸೂರಜ್ ಮೆಹರ್ (40) ತಮ್ಮ ನಿಶ್ಚಿತಾರ್ಥ ದಿನವೇ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಬುಧವಾರ ರಾತ್ರಿ ರಾಯಪುರದಲ್ಲಿ ಶೂಟಿಂಗ್ ಮುಗಿಸಿ ವಾಪಸಾಗುತ್ತಿದ್ದ ವೇಳೆ ಸೂರಜ್ ಅವರ ಕಾರು ಪಿಕ್ ಅಪ್ ಟ್ರಕ್ ಗೆ ಡಿಕ್ಕಿ ಹೊಡೆದಿದೆ.

    ಪೈಪುಲಾ ಬಳಿ ಸಾರಶಿವ ಕಡೆಯಿಂದ ಬರುತ್ತಿದ್ದ ಪಿಕಪ್ ವಾಹನಕ್ಕೆ ಸೂರಜ್ ಅವರ ಕಾರು ಡಿಕ್ಕಿ ಹೊಡೆದಿದೆ. ಈ ವೇಳೆ ಸೂರಜ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಅಪಘಾತದಲ್ಲಿ ಸೂರಜ್ ಸ್ನೇಹಿತ ಹಾಗೂ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಾಥಮಿಕ ಚಿಕಿತ್ಸೆ ಬಳಿಕ ಇಬ್ಬರನ್ನೂ ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಬಿಲಾಸ್‌ಪುರಕ್ಕೆ ರವಾನಿಸಲಾಗಿದೆ. ಬಿಲಾಸ್‌ಪುರದ ಸರಿಯಾ ನಿವಾಸಿ ಸೂರಜ್ ಅವರನ್ನು ಚಲನಚಿತ್ರ ಜಗತ್ತಿನಲ್ಲಿ ನಾರದ್ ಮೆಹರ್ ಎಂದು ಕರೆಯಲಾಗುತ್ತದೆ. ಸೂರಜ್ ತಮ್ಮ ಖಳ ಪಾತ್ರಗಳಿಂದ ಗುರುತಿಸಿಕೊಂಡ ನಟ. ಅವರು ಹಲವಾರು ಛತ್ತೀಸ್‌ಗಢಿ ಚಲನಚಿತ್ರಗಳಲ್ಲಿ ನಕಾರಾತ್ಮಕ ಪಾತ್ರಗಳನ್ನು ನಿರ್ವಹಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply