FILM
ನನಗೆ ಬೆನ್ನು ನೋವು ಇದೆ.. ತುಂಬಾ ಹೊತ್ತು ನಿಲ್ಲಲು ಆಗಲ್ಲ – ಅಭಿಮಾನಿಗಳಿಗೆ ಡಿ ಬಾಸ್ ಮನವಿ
ಬೆಂಗಳೂರು ಫೆಬ್ರವರಿ 08: ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ನಟ ದರ್ಶನ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ಫೆಬ್ರುವರಿ 16ರಂದು ನಟ ದರ್ಶನ್ ಜನ್ಮದಿನವಿದ್ದು ಈ ಹಿನ್ನಲೆ ವಿಶೇಷ ವಿಡಿಯೋ ಮಾಡಿರುವ ಅವರು ಅಭಿಮಾನಿಗಳಿಗೆ ಈ ಬಾರಿ ತಾನು ಹುಟ್ಟು ಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ವಿಡಿಯೋದಲ್ಲಿ ದರ್ಶನ ನನಗೆ ಬೆನ್ನು ನೋವು ಇದೆ. ತುಂಬಾ ಹೊತ್ತು ನಿಲ್ಲಲು ಆಗಲ್ಲ. ಹಾಗಾಗಿ ಈ ಬಾರಿ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಕ್ಷಮೆ ಇರಲಿ. ನನ್ನ ಎಲ್ಲಾ ಪ್ರೀತಿಯ ಅಭಿಮಾನಿಗಳಿಗೆ ಧನ್ಯವಾದಗಳು’ ಎಂದು ಅವರು ಹೇಳಿದ್ದಾರೆ.
‘ದಯಮಾಡಿ ಯಾವುದೇ ಊಹಾಪೋಹಗಳಿಗೆ ಕಿವಿಕೊಡಬೇಡಿ. ಸೂರಪ್ಪ ಬಾಬು ಅವರಿಗೆ ನಾನು ಹಣವನ್ನು ಮರಳಿ ಕೊಟ್ಟಿದ್ದೇನೆ. ಇಂಡಸ್ಟ್ರಿಯಲ್ಲಿನ ಆಪ್ತರು ನನ್ನ ಬಳಿ ಅವರನ್ನು ಕರೆದುಕೊಂಡು ಬಂದಿದ್ದರು. ಈಗ ಸಮಯವೆಲ್ಲ ವ್ಯರ್ಥವಾಗಿದೆ. ಅವರ ಅಡ್ವಾನ್ಸ್ ಹಣ ಇಟ್ಟುಕೊಂಡರೆ ಅವರ ಕಮಿಟ್ಮೆಂಟ್ ಮತ್ತಷ್ಟು ಹೆಚ್ಚುತ್ತದೆ. ಮುಂದಿನ ದಿನಗಳಲ್ಲಿ ಒಳ್ಳೆಯ ಸಬ್ಜೆಕ್ಟ್ ಸಿಕ್ಕರೆ ಸಿನಿಮಾ ಮಾಡೋಣ ಎಂದು ಹೇಳಿದ್ದೇನೆ’ ಎಂದಿದ್ದಾರೆ ದರ್ಶನ್.
‘ನಾನು ಪ್ರೇಮ್ ಸಿನಿಮಾ ಮಾಡಿಯೇ ಮಾಡುತ್ತೇವೆ. ನನ್ನ ಗೆಳತಿ ರಕ್ಷಿತಾಳ ಆಸೆ. ಹೀಗಾಗಿ ಮಾಡೇ ಮಾಡ್ತೀವಿ. ಕೆವಿಎನ್ ಪ್ರೊಡಕ್ಷನ್ ಒಂದಷ್ಟು ಸಿನಿಮಾ ಮಾಡ್ತಾ ಇದಾರೆ. ಹೀಗಾಗಿ, ಸಿನಿಮಾ ಮಾಡದೇ ಇರುವವರ ಜೊತೆ ಮೊದಲು ಚಿತ್ರ ಮಾಡುತ್ತೇನೆ. ಪ್ರೀತಿ, ಪ್ರೋತ್ಸಾಹ ಹೀಗೆಯೇ ಇರಲಿ’ ಎಂದು ದರ್ಶನ್ ಹೇಳಿದ್ದಾರೆ. ಈ ಮೂಲಕ ಇವರ ಸಿನಿಮಾ ವಿಳಂಬಕ್ಕೆ ಕಾರಣ ತಿಳಿಸಿದ್ದಾರೆ.
ದರ್ಶನ್ ಅವರು ಜೈಲಿನಲ್ಲಿ ಇದ್ದಾಗ ಅಭಿಮಾನಿಗಳು ಸಾಕಷ್ಟು ಬೆಂಬಲ ನೀಡಿದ್ದರು. ಈ ವಿಚಾರಕ್ಕೆ ಅವರಿಗೆ ಸಾಕಷ್ಟು ಖುಷಿ ಇದೆ. ‘ಧನ್ವೀರ್, ರಚಿತಾ ರಾಮ್, ರಕ್ಷಿತಾಗೆ ಹಾಗೂ ನನ್ನ ಸೆಲೆಬ್ರಿಟಿಗಳಿ ಥ್ಯಾಂಕ್ಸ್. ನಾನು ಬೇರೆ ಭಾಷೆಗೆ ಹೋಗ್ತೀನಿ ಎನ್ನುವುದೆಲ್ಲ ಸುಳ್ಳು. ಇಲ್ಲಿ ಕೊಟ್ಟ ಪ್ರೀತಿ ನನಗೆ ಸಾಕು’ ಎಂದು ದರ್ಶನ್ ಹೇಳಿದ್ದಾರೆ.