LATEST NEWS
ಕೇರಳದಲ್ಲಿ ಕೊರೊನಾ ಅಬ್ಬರ :1,324 ಮಂದಿಗೆ ಸೋಂಕು, ಇಬ್ಬರು ಮೃತ್ಯು..!
ನವದೆಹಲಿ : ಕೋವಿಡ್-19 ಜೆಎನ್ ನ ಇತ್ತೀಚಿನ ಆವೃತ್ತಿಯ ಒಂದು ಪ್ರಕರಣ ಕೇರಳದಲ್ಲಿ ಶನಿವಾರ ಪತ್ತೆಯಾಗಿದ್ದು, ಇದರ ಜೊತೆಗೆ ಸರ್ಕಾರ ಅತಿ ಹೆಚ್ಚು ಕರೋನ ವೈರಸ್ ಸೋಂಕಿತರು ಇರುವುದನ್ನು ದೃಡಪಡಿಸಿದೆ. ರಾಜ್ಯದ ತಿರುವನಂತಪುರಂನ 79 ವರ್ಷದ ಮಹಿಳೆ ಇನ್ಫ್ಲುಯೆನ್ಸ ಲೈಕ್ ಇಲ್ನೆಸ್ (ಐಎಲ್‌ಐ) ನ ಸೌಮ್ಯ ಲಕ್ಷಣಗಳನ್ನು ಹೊಂದಿದ್ದರು ಎಂದು ಹೇಳಲಾಗಿದ್ದು ಪ್ರಸ್ತುತ ಚೇತರಿಸಿಕೊಂಡಿದ್ದಾರೆ.
ಪ್ರತಿದಿನ 700 ರಿಂದ 1,000 ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಇದು ಭಾರತದ ಅತಿದೊಡ್ಡ ಪರೀಕ್ಷೆ ಎಂದು ಸರ್ಕಾರ ಹೇಳಿದೆ. ಕಳೆದ ಎರಡು ದಿನಗಳಲ್ಲಿ ರಾಜ್ಯದ ಉತ್ತರ ಭಾಗದಲ್ಲಿ ಕೋವಿಡ್ -19 ನಿಂದ ಎರಡು ಸಾವುಗಳು ವರದಿಯಾಗಿವೆ. ಭಾರತೀಯ ಸಾರ್ಸ್-ಕೋವ್-2 ಜೀನೋಮಿಕ್ಸ್ ಕನ್ಸೋರ್ಟಿಯಂ (ಐಎನ್‌ಎಸ್‌ಎಸಿಒಜಿ) ನ ನಿಯಮಿತ ಸ್ಕ್ರೀನಿಂಗ್ ಯೋಜನೆಯ ಭಾಗವಾಗಿ ಜೆಎನ್ .1 ರೂಪಾಂತರವನ್ನು ಗುರುತಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ನಿರ್ದೇಶಕರು ಶನಿವಾರ ತಿಳಿಸಿದ್ದಾರೆ.
ಕರ್ನಾಟಕ ಗಡಿ ಜಿಲ್ಲೆಗಳು ಹೈ ಅಲರ್ಟ್:
ನೆರೆ ರಾಜ್ಯ ಕೇರಳದಲ್ಲಿ ಕೋವಿಡ್ ರೂಪಾಂತರಿ ವೈರಸ್ ಸೋಂಕಿನ ಕೇಸ್ ಹೆಚ್ಚಳ ಹಿನ್ನೆಲೆಯಲ್ಲಿ ಕರ್ನಾಟಕ ಗಡಿ ಭಾಗದ ಮೈಸೂರು ಹಾಗೂ ಕೊಡಗು ಜಿಲ್ಲೆಗಳಲ್ಲೂ ಆರೋಗ್ಯ ಇಲಾಖೆ ಮುಂಜಾಗ್ರತೆ ವಹಿಸಿದೆ.
ಈ ಬಗ್ಗೆ ಮೈಸೂರು ಡಿಎಚ್‌ಒ ಡಾ. ಪಿ. ಸಿ. ಕುಮಾರಸ್ವಾಮಿ ಮಾಧ್ಯಮಗಳ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಈವರೆಗೂ ಕೊರೊನಾ ರೂಪಾಂತರಿ ಪ್ರಕರಣಗಳು ದಾಖಲಾಗಿಲ್ಲ. ಆದಾಗ್ಯೂ ಯಾವುದೇ ಪರಿಸ್ಥಿತಿ ಉಂಟಾದರೂ ಎದುರಿಸಲು ಸಿದ್ಧವಾಗಿದ್ದೇವೆ ಎಂದಿದ್ದಾರೆ.ಈ ಸಂಬಂಧ ಈಗಾಗಲೇ ಆರೋಗ್ಯ ಸಚಿವರು ಸಭೆ ನಡೆಸಿದ್ದಾರೆ. ಕೇರಳ ಗಡಿಯಲ್ಲಿ ತಪಾಸಣೆ ನಡೆಸುವಷ್ಟು ಸೂಕ್ಷ್ಮತೆ ಸದ್ಯಕ್ಕಿಲ್ಲ. ಆರೋಗ್ಯ ಸಿಬ್ಬಂದಿ ಮೂಲಕ ತಪಾಸಣೆ ನಡೆಸುವಷ್ಟು ಸೂಕ್ಷ್ಮತೆ ಇಲ್ಲ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ. ಸಾರ್ವಜನಿಕರು ಯಾವುದೇ ರೀತಿ ಆತಂಕ ಪಡುವ ಅಗತ್ಯವಿಲ್ಲ. ಜ್ವರ, ಕೆಮ್ಮು, ನೆಗಡಿ ಸೇರಿದಂತೆ ಯಾವುದೇ ಅನಾರೋಗ್ಯದ ಲಕ್ಷಣ ಇದ್ರೆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪರೀಕ್ಷೆ ಮಾಡಿಸಿಕೊಳ್ಳಿ. ಆರೋಗ್ಯ ಇಲಾಖೆ ನೀಡುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದ್ದಾರೆ.