Connect with us

DAKSHINA KANNADA

ಕ್ಷಯರೋಗಿಗಳ ಮಾಹಿತಿ ಮುಚ್ಚಿಡುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ

ಪುತ್ತೂರು, ಜೂನ್ 13: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಪುತ್ತೂರು ತಾಲೂಕು ಘಟಕ ನೇತೃತ್ವದಲ್ಲಿ ಕ್ಷಯಮುಕ್ತ ಭಾರತ ಮಾಹಿತಿ ಶಿಬಿರ ಪುತ್ತೂರು ಪತ್ರಿಕಾಭವನದಲ್ಲಿ ಜೂನು 13 ರಂದು ನಡೆಯಿತು.

ಮಾಹಿತಿ ಶಿಬಿರವನ್ನು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಉದ್ಘಾಟಿಸಿದರು. ಕಾರ್ಯನಿರತ ಪತ್ರಕರ್ತರ ಸಂಘ ಜನಸಾಮಾನ್ಯನಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯದಾದ್ಯಂತ ಇಂಥಹ ಹಲವಾರು ಆರೋಗ್ಯ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ‌.

ಪುತ್ತೂರು ತಾಲೂಕು ಘಟಕ ಕ್ಷಯಮುಕ್ತ ಭಾರತ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸುವ ಮೂಲಕ ಪತ್ರಕರ್ತರ ಜೊತೆಗೆ ಜನತೆಗೂ ಕ್ಷಯರೋಗದ ಮಾಹಿತಿಯನ್ನು ಹಂಚುವ ಕೆಲಸ ಮಾಡಿದೆ ಎಂದರು. ಕ್ಷಯರೋಗದ ಕುರಿತು ಮಾಹಿತಿ ನೀಡಿದ ದಕ್ಷಿಣಕನ್ನಡ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಬದ್ರುದ್ಧೀನ್ 2025 ರ ಒಳಗೆ ದೇಶದಲ್ಲಿ ಕ್ಷಯರೋಗವನ್ನು ಸಂಪೂರ್ಣವಾಗಿ ತೊಲಗಿಸುವ ಗುರಿಯನ್ನು ಇಡಲಾಗಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಆರೋಗ್ಯ ಇಲಾಖೆ ಹಲವು ರೀತಿಯ ಮಾಹಿತಿ ಕಾರ್ಯಾಗಾರಗಳ ಜೊತೆಗೆ ಕ್ಷಯರೋಗಿಗಳಿಗೆ ಉತ್ತಮ ಚಿಕಿತ್ಸೆಯನ್ನು ನೀಡುವ ಕಾರ್ಯವನ್ನೂ ಮಾಡುತ್ತಿದೆ.

ದಕ್ಷಿಣಕನ್ನಡ ಜಿಲ್ಲೆಯಲ್ಲಿ 2022 ರ ಲೆಕ್ಕಾಚಾರದ ಪ್ರಕಾರ 2954 ಕ್ಷಯರೋಗಿಗಳಿಗೆ ಚಿಕಿತ್ಸೆ ನೀಡಲಾಗಿದ್ದು, ಆರೋಗ್ಯ ಇಲಾಖೆ ಕ್ಷಯರೋಗಿಗಳಿಗೆ ಸಂಒಊರ್ಣ ಉಚಿತ ಚಿಕಿತ್ಸೆಯ ಜೊತೆಗೆ ಪೌಷ್ಟಿಕಾಹಾರವನ್ನೂ ಉಚಿತವಾಗಿ ವಿತರಿಸುತ್ತಿದ್ದು, ಕ್ಷಯರೋಗಿಗಳನ್ನು ನೋಡಿಕೊಳ್ಳಲು ವ್ಯಕ್ತಿಗೂ ಸರಕಾರ ಆರ್ಥಿಕ ಸಹಾಯಧನ ನೀಡುವ ವ್ಯವಸ್ಥೆಯೂ ಆರೋಗ್ಯ ಇಲಾಖೆಯಲ್ಲಿದೆ ಎಂದರು.

ಕ್ಷಯರೋಗಕ್ಕೆ ಚಿಕಿತ್ಸೆ ನೀಡುವ ಖಾಸಗಿ ಆಸ್ಪತ್ರೆಗಳು ರೋಗಿಗಳ ಮಾಹಿತಿಯನ್ನು ಕಡ್ಡಾಯವಾಗಿ ಆರೋಗ್ಯ ಇಲಾಖೆಗೆ ನೀಡಬೇಕಿದ್ದು, ಈ ರೀತಿ ಮಾಡದ ಖಾಸಗಿ ಆಸ್ಪತ್ರೆ ಅಥವಾ ಕ್ಲಿನಿಕ್ ಗಳ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *