LATEST NEWS
ಧಾರ್ಮಿಕ ಭಾವನೆಗೆ ಧಕ್ಕೆ ತರುವ ಸಂದೇಶ ಕಳುಹಿಸಿದರೆ… ಗ್ರೂಪ್ ಆಡ್ಮಿನ್ ಗಳ ವಿರುದ್ದ ಕ್ರಮ…

ಧಾರ್ಮಿಕ ಭಾವನೆಗೆ ಧಕ್ಕೆ ತರುವ ಸಂದೇಶ ಕಳುಹಿಸಿದರೆ… ಗ್ರೂಫ್ ಆಡ್ಮಿನ್ ಗಳ ವಿರುದ್ದ ಕ್ರಮ…
ಮಂಗಳೂರು ಡಿಸೆಂಬರ್ 19: ಡಿಸೆಂಬರ್ 20 ಹಾಗೂ 23 ರಂದು ಪ್ರತಿಭಟನೆ ನಡೆಸಲಾಗುವುದೆಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹರಿಯ ಬಿಟ್ಟ ಹಿನ್ನಲೆ ಪೊಲೀಸ್ ಇಲಾಖೆ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇರಿಸಿದೆ.
ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಸಂದೇಶಗಳು ಕೆಲವು ಮೊಬೈಲ್ ನಂಬರ್ ನಿಂದ ಹರಿದಾಡುತ್ತಿದ್ದು, ಇಂತರ ಸಂದೇಶಗಳ ಮೇಲೆ ಪೊಲೀಸ್ ಇಲಾಖೆ ತೀವ್ರ ನಿಗಾವಹಿಸಿದೆ ಎಂದು ಪೊಲೀಸ್ ಆಯುಕ್ತ ಹರ್ಷ ತಿಳಿಸಿದ್ದಾರೆ.

ಅಲ್ಲದೆ ಈ ರೀತಿಯ ಸಂದೇಶಗಳು ಇರುವ ವಾಟ್ಸಪ್ ಗ್ರೂಫ್ ಆಡ್ಮಿನ್ ಗಳನ್ನು ನೇರ ಹೊಣೆಗಾರಿಕೆ ಮಾಡಿ ಅವರ ವಿರುದ್ದ ಕಠಿಣ ಕಾನೂನು ಕ್ರಮಕೈಗೊಳ್ಳಲಾಗುವುದೆಂದು ಪೊಲೀಸ್ ಆಯುಕ್ತ ಹರ್ಷ ತಿಳಿಸಿದ್ದಾರೆ.