LATEST NEWS
13 ವರ್ಷ ಪ್ರಾಯದ ಬಾಲಕ ಜೀವ ತೆಗೆದ ಖಾಸಗಿ ಬಸ್….!!

ಮಂಗಳೂರು ಅಕ್ಟೋಬರ್ 17: ಖಾಸಗಿ ಬಸ್ ಚಾಲಕನ ಅತೀವೇಗಕ್ಕೆ 13 ವರ್ಷ ಪ್ರಾಯದ ಬಾಲಕನೊಬ್ಬ ನಡು ರಸ್ತೆಯಲ್ಲಿ ತನ್ನ ಪ್ರಾಣ ಕಳೆದುಕೊಂಡ ಘಟನೆ ಮಂಗಳೂರಿನ ಲಾಲ್ ಭಾಗ್ ಬಳಿ ನಡೆದಿದೆ. ಮೃತ ಬಾಲಕನನ್ನು ಪಡೀಲ್ ಕಣ್ಣೂರಿನ 13 ವರ್ಷದ ಪ್ರಾಯದ ರಕ್ಷಣ್ ಎಂದು ಗುರುತಿಸಲಾಗಿದೆ.
ಸ್ಕೂಟರ್ ಸವಾರ ನಾರಾಯಣ ಎಂಬವರಿಗೆ ಗಂಭೀರಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸವಾರ ನಾರಾಯಣ ಅವರು ಸಂಬಂಧಿ ರಕ್ಷಣ್ ಅವರನ್ನು ಹಿಂಬದಿ ಕುಳ್ಳಿರಿಸಿ ಕೊಟ್ಟಾರ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುತ್ತಿದ್ದಾಗ ಅಪಘಾತ ಸಂಭವಿಸಿದೆ.
ಮಂಗಳೂರು – ಕಿನ್ನಿಗೋಳಿ – ಕಟೀಲು ನಡುವೆ ಸಂಚರಿಸುವ ಖಾಸಗಿ ಬಸ್ಸು ಇನ್ನೊಂದು ಬಸ್ಸನ್ನು ಓವರ್ ಟೇಕ್ ಮಾಡುವ ಭರದಲ್ಲಿ ಬಂದು ದ್ವಿಚಕ್ರ ವಾಹನ ಸವಾರರಿಗೆ ಡಿಕ್ಕಿ ಹೊಡೆದಿದೆ. ಸವಾರ ನಾರಾಯಣ ಅವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದರೆ, ಸಂಬಂಧಿ ಬಾಲಕ ರಕ್ಷಣ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸಂಚಾರಿ ಪಶ್ವಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
