DAKSHINA KANNADA
ದಿಢೀರನೆ ಬ್ರೇಕ್ ಹಾಕಿದ ಬಸ್ ಚಾಲಕ: ಟಿ ಟಿ ವಾಹನ ಡಿಕ್ಕಿ
ಪುತ್ತೂರು ಡಿಸೆಂಬರ್ 02: ಕೆಎಸ್ಆರ್ ಟಿಸಿ ಬಸ್ ಹಠಾತ್ತ್ ಬ್ರೇಕ್ ಹಾಕಿದ ಪರಿಣಾಮ ಟಿಟಿ ವಾಹನ ಹಿಂಬದಿಯಿಂದ ಬಸ್ ಡಿಕ್ಕಿ ಹೊಡೆದ ಘಟನೆ ಕುಂಬ್ರದಲ್ಲಿ ನಡೆದಿದೆ.
ಸುಳ್ಯದಿಂದ ಬರುತ್ತಿದ್ದ ಕೆಸ್ ಆರ್ ಟಿಸಿ ಬಸ್ಸು ಪ್ರಯಾಣಿಕನನ್ನು ಇಳಿಸಿ ಉದ್ದೇಶದಿಂದ ಬಸ್ ತಂಗುದಾಣ ದಿಂದ ಸ್ವಲ್ಪ ದೂರದಲ್ಲಿ ಬಸ್ ನಿಲ್ಲಿಸಿದ ಕಾರಣ ಹಿಂಬದಿಯಿಂದ ಬರುತ್ತಿದ್ದ ಮೈಸೂರಿನಿಂದ ಬರುತ್ತಿದ್ದ ಟಿ ಟಿ ವಾಹನ ಡಿಕ್ಕಿ ಹೊಡೆದಿದ್ದು ಟಿ ಟಿ ವಾಹನ ನಜ್ಜುಗುಜ್ಜಾಗಿದೆ. ಸಂಪ್ಯ ಠಾಣೆಯಲ್ಲಿ ಕೇಸು ದಾಖಲಾಗಿದೆ. ಯಾವುದೇ ಪ್ರಯಾಣಿಕರಿಗೆ ಗಾಯವಾಗಿಲ್ಲ