KARNATAKA
ನಿಂತಿದ್ದ ಲಾರಿಗೆ ಕಾರು ಡಿಕ್ಕಿ – ಗರ್ಭಿಣಿ ಸೇರಿ 7 ಮಂದಿ ದಾರುಣ ಸಾವು

ಕಲಬುರಗಿ ಸೆಪ್ಟೆಂಬರ್ 27: ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸುವ ದಾವಂತದಲ್ಲಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ 7 ಮಂದಿ ಸ್ಥಳದಲ್ಲೇ ಸಾವನಪ್ಪಿರು ಘಟನೆ ಕಲಬುರಗಿ ಹೊರವಲಯದ ಆಳಂದ ರಸ್ತೆಯ ಸಾವಳಗಿ ಬಳಿ ಇಂದು ನಸುಕಿನ ವೇಳೆ ಸಂಭವಿಸಿದೆ.
ಮೃತರನ್ನು ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ನಿವಾಸಿಗಳಾಗಿರುವ ಇರ್ಫಾನಾ ಬೇಗಂ – ಗರ್ಭಿಣಿ ಮಹಿಳೆ, ರುಚಿಯಾ ಬೇಗಂ, ಅಬೇದಾಬಿ ಬೇಗಂ, ಮುನೀರ್, ಮಹಮ್ಮದ್ ಅಲಿ, ಶೌಕತ್ ಅಲಿ, ಜಯತುನಬಿ ಎಂದು ಗುರುತಿಸಲಾಗಿದೆ.

ಗರ್ಭಿಣಿ ಮಹಿಳೆಯನ್ನ ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಲು ಕಲಬುರಗಿಗೆ ಕರೆದುಕೊಂಡು ಬರುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ತುಂಬು ಗರ್ಭಿಣಿಗೆ ಬಸ್ಸಿನಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿತು. ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಪತಿ ಮತ್ತು ಕುಟುಂಬದವರು ಕಾರಿನಲ್ಲಿ ತೆರಳುತ್ತಿದ್ದರು ಎನ್ನಲಾಗಿದೆ. ಕಾರು ಡಿಕ್ಕಿ ಹೊಡೆದ ಪರಿಣಾಮ ಲಾರಿಯೂ ಪಲ್ಟಿಯಾಗಿದ್ದು, ಲಾರಿಯಲ್ಲಿದ್ದ ಯಾರಿಗೂ ಏನೂ ಆಗಿಲ್ಲ. ಕಾರು ಅಷ್ಟೊಂದು ರಭಸವಾಗಿ ಬಂದು ಡಿಕ್ಕಿ ಹೊಡೆದಿದೆ ಎನ್ನಲಾಗಿದ್ದು, ಕಲಬುರಗಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.