Connect with us

LATEST NEWS

ಆ್ಯಂಕರ್ ಅನುಶ್ರೀಗೆ ಡೋಪಿಂಗ್ ಟೆಸ್ಟ್ ಸಾಧ್ಯತೆ…!!

ಮಂಗಳೂರು ಸೆಪ್ಟೆಂಬರ್ 27: ಮಂಗಳೂರಿನಲ್ಲಿ ಡ್ರಗ್ಸ್ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಇಂದು ಸಿಸಿಬಿ ಪೊಲೀಸರು ಮತ್ತೊಬ್ಬ ಡ್ರಗ್ ಪೆಡ್ಲರ್ ನನ್ನು ಬಂಧಿಸಿದ್ದಾರೆ. ಈ ನಡುವೆ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ವಿಚಾರಣೆ ಎದುರಿಸಿದ್ದ ಆ್ಯಂಕರ್ ಅನುಶ್ರೀಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ.


ಸಿಸಿಬಿ ವಿಚಾರಣೆ ಬಳಿಕ ಮಾಧ್ಯಮಗಳ ಬಳಿ ಆತ್ಮವಿಶ್ವಾಸದಿಂದ ಮಾತನಾಡಿದ್ದ ಅನುಶ್ರೀಗೆ ಇದೀಗ ಅನುಶ್ರೀಗೆ ಡೋಪಿಂಗ್ ಟೆಸ್ಟ್ ಭಯ ಕಾಡುತ್ತಿದೆ. ಸಿಸಿಬಿ ತನಿಖೆ ಮುಗಿದ ಬಳಿಕ ಅನುಶ್ರೀ ಖುಷಿಯಾಗಿದ್ದರು. ಆದರೆ ಮಂಗಳೂರಿನ ಪೊಲೀಸ್ ಕಮಿಷನರ್ ಹೇಳಿಕೆ ಬಳಿಕ ನಟಿ ಅನುಶ್ರಿಗೆ ಮತ್ತೆ ಭಯ ಕಾಡಲಾರಂಭಿಸಿದೆ.


ನಿನ್ನೆ ವಿಚಾರಣೆ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ಡ್ರಗ್ಸ್ ಟೆಸ್ಟ್ ಮಾಡಿಸಲು ಸಿದ್ಧತೆ ನಡೆಸಲಾಗಿದೆ ಎಂದಿದ್ದಾರೆ. ಇದರಿಂದಾಗಿ ಅನುಶ್ರೀಗೆ ಚಿಂತೆ ಕಾಡಲು ಆರಂಭವಾಗಿದೆ. ಈ ಮಧ್ಯೆ ಡೋಪಿಂಗ್ ಟೆಸ್ಟ್ ಮಾಡಿಸದಂತೆ ಪ್ರಭಾವಿಯೊಬ್ಬರು ಒತ್ತಡ ಹೇರುತ್ತಿದ್ದಾರೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.