DAKSHINA KANNADA
ಬಂದ್ಯೋಡಿ – ಕಾರು ಮತ್ತು ಸ್ಕೂಟರ್ ನಡುವೆ ಭೀಕರ ರಸ್ತೆ ಅಪಘಾತ – ಬಿಜೆಪಿ ಕುಂಬಳೆ ಮಂಡಲ ಕಾರ್ಯದರ್ಶಿ ದುರಂತ ಅಂತ್ಯ
ಮಂಜೇಶ್ವರ, ಡಿಸೆಂಬರ್ 14: ಸ್ಕೂಟರ್ ಹಾಗೂ ಕಾರಿನ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬಿಜೆಪಿ ಮುಖಂಡರೊಬ್ಬರು ಸಾವನಪ್ಪಿದ ಘಟನೆ ಕಾಸರಗೋಡು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಉಪ್ಪಳ ಬಳಿಯ ಬಂಟಿ ಸಂಭವಿಸಿದೆ.
ಉಪ್ಪಳ ಪ್ರತಾಪ್ ನಗರದ ಕುಂಬಳೆ ಮಂಡಲ ಕಾರ್ಯದರ್ಶಿ ಧನರಾಜ್ (44) ಸಾವನಪ್ಪಿದವರು. ಶನಿವಾರ ಮಧ್ಯಾಹ್ನ ಬಂದ್ಯೋಡಿನಲ್ಲಿ ಬಿಜೆಪಿ ಮೀಟಿಂಗ್ ಮುಗಿಸಿ ಮನೆ ಕಡೆಗೆ ಹಿಂತಿರುಗುತ್ತಿದ್ದಾಗ ಇವರ ಬೈಕಿಗೆ ಕಾರು ಡಿಕ್ಕಿಯಾಗಿ ಸಾವು ಕಂಡಿದ್ದಾರೆ.
ಬಂದ್ಯೋಡು ಶಿರಿಯಾದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಏಕಮುಖದ ರಸ್ತೆಯಲ್ಲಿ ಎರಡೂ ಕಡೆಯ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಲಾಗಿತ್ತು. ಇದರಿಂದಾಗಿ ರಸ್ತೆಯಲ್ಲಿ ವಿರುದ್ಧ ದಿಕ್ಕಿನಿಂದ ಹೋಗುತ್ತಿದ್ದ ವೇಳೆ ಎದುರಿನಿಂದ ವೇಗವಾಗಿ ಬಂದ ಕಾರೊಂದು ಬೈಕಿಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದ ಧನರಾಜ್ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.