DAKSHINA KANNADA
ಪುತ್ತೂರು – ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು
ಪುತ್ತೂರು ಡಿಸೆಂಬರ್ 12: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಪುತ್ತೂರಿನ ಬೈಪಾಸ್ ತೆಂಕಿಲ ವಿವೇಕಾನಂದ ಶಾಲೆಯ ಬಳಿ ನಡೆದಿದೆ.
ಕಾರಿನಲ್ಲಿದ್ದ ತಾಯಿ ಮತ್ತು ಪುತ್ರಿ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಮಂಗಳೂರಿನ ಪಿ.ಜಿ. ಒಂದರಲ್ಲಿ ವಾಸ್ತವ್ಯವಿರುವ ಬೆಳಾರಾಣಿ (49) ಮತ್ತು ಅವರ ಪುತ್ರಿ ಅಕ್ಷ ಎಲ್.ಪಟೇಲ್ ಗಾಯಗೊಂಡವರು. ಬೆಳಾರಾಣಿ ಅವರು ಕಾರಿನಲ್ಲಿ ಪುತ್ರಿಯೊಂದಿಗೆ ಮೈಸೂರು ಮಡಿಕೇರಿ ಮಾರ್ಗವಾಗಿ ಮಂಗಳೂರಿಗೆ ತೆರಳುತ್ತಿದ್ದ ವೇಳೆ ಅವಘಡ ನಡೆದಿದೆ. ನಿಯಂತ್ರಣ ಕಳೆದುಕೊಂಡ ಕಾರು ಬೈಪಾಸ್ ರಸ್ತೆಯ ಅಲ್ಯುಮಿನಿಯಂ ತಡೆಬೇಲಿಗೆ ಡಿಕ್ಕಿ ಹೊಡೆದು ತಲೆಕೆಳಗಾಗಿ ರಸ್ತೆ ಪಕ್ಕದ ಕೆಳಭಾಗಕ್ಕೆ ಪಲ್ಟಿಯಾಗಿದೆ. ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.