KARNATAKA
12 ಸಾವಿರ ರೂ ಲಂಚ ಸ್ವೀಕಾರ : ಆಳಂದ ತಹಶೀಲ್ದಾರ್, ರೆವಿನ್ಯೂ ಇನ್ಸ್‌ಪೆಕ್ಟರ್ ಲೋಕಾಯುಕ್ತದ ಬಲೆಗೆ..!
12 ಸಾವಿರ ರೂ. ಲಂಚ ಸ್ವೀಕಾರ ಮಾಡುತ್ತಿದ್ದ ವೇಳೆ ಕಲಬುರಗಿಯ ಆಳಂದ ಪಟ್ಟಣದ ತಹಶೀಲ್ದಾರ್ ಮತ್ತು ರೆವೆನ್ಯೂ ಇನ್ಸ್‌ಪೆಕ್ಟರ್ ಇಬ್ಬರು ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಕಲಬುರಗಿ: 12 ಸಾವಿರ ರೂ. ಲಂಚ ಸ್ವೀಕಾರ ಮಾಡುತ್ತಿದ್ದ ವೇಳೆ ಕಲಬುರಗಿಯ ಆಳಂದ ಪಟ್ಟಣದ ತಹಶೀಲ್ದಾರ್ ಮತ್ತು ರೆವೆನ್ಯೂ ಇನ್ಸ್‌ಪೆಕ್ಟರ್ ಇಬ್ಬರು ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಆಳಂದ ತಾಲೂಕಿನ ತಹಶೀಲ್ದಾರ್ ಯಲ್ಲಪ್ಪ ಸುಬೇದಾರ್, ಕಂದಾಯ ಅಧಿಕಾರಿ ರಾಜಶೇಖರ್ ಲೋಕಾಯುಕ್ತರ ಬಲೆಗೆ ಬಿದ್ದ ಅಧಿಕಾರಿಗಳು ಎಂದು ತಿಳಿದು ಬಂದಿದೆ.
ಕಂದಾಯ ಅಧಿಕಾರಿ ರಾಜಶೇಖರ್ ಮೂಲಕ 12 ಸಾವಿರ ರೂ ಲಂಚ ಪಡೆಯುವಾಗ ಲೋಕಾ ಬಲೆಗೆ ಬಿದ್ದಿದಾರೆ.
ಮೆಹಬೂಬ್ ಪಟೇಲ್ ಲಂಬೇವಾಡಿ ಎಂಬಾತರಿಗೆ ಎನ್ಎ ಎನ್ಓಸಿ ಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದರು ಎಂದು ಹೇಳಲಾಗಿದೆ.
ಎನ್ ಒಸಿ ಕೊಡಲು ಡಿಸಿಗೆ ಶಿಫಾರಸು ಮಾಡೋದಕ್ಕೆ ತಹಶಿಲ್ದಾರ್ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಲೋಕಾಯುಕ್ತ ಎಸ್ಪಿ ಕರ್ನೂಲ್, ಮಾರ್ಗದರ್ಶನದಲ್ಲಿ ಸಿಪಿಐಗಳಾದ ನಾನಾಗೌಡ, ದ್ರುವತಾರೆ, ಅಕ್ಕಮಹಾದೇವಿ ನೇತೃತ್ವದಲ್ಲಿ ಗುರುವಾರ ತಹಶೀಲ್ ಕಚೇರಿ ಮೇಲೆ ದಾಳಿ ನಡೆಸಿ ತಹಶಿಲ್ದಾರ್ ಯಲ್ಲಪ್ಪ ಸುಬೇದಾರ್, ಆರ್ಐ ರಾಜಶೇಖರ್ ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.