LATEST NEWS
ವೈದ್ಯಕೀಯ ವಿದ್ಯಾರ್ಥಿಗಳಿಗೆ ವಂಚನೆ : ಆರೋಪಿಯನ್ನು ಬಂಧಿಸುವಂತೆ ABVP ಪ್ರತಿಭಟನೆ

ವೈದ್ಯಕೀಯ ವಿದ್ಯಾರ್ಥಿಗಳಿಗೆ ವಂಚನೆ ಮಾಡಿದ ಆರೋಪಿಯನ್ನು ಬಂಧಿಸುವಂತೆ ABVP ಪ್ರತಿಭಟನೆ
ಮಂಗಳೂರು,ಡಿಸೆಂಬರ್ 15 : ಮಂಗಳೂರಿನ ಖಾಸಾಗಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಿಗೆ ವಂಚನೆ ಮಾಡಿದ ಆರೋಪಿಯನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿತು.
ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಎಬಿವಿಪಿ ಕಾರ್ಯಕರ್ತರು ಕೊಲಾಸೋ ಕಾಲೇಜಿನ 150 ವಿದ್ಯಾರ್ಥಿಗಳಿಗೆ ವಂಚನೆ ನಡೆಸಲಾಗಿದೆ.

ಸರ್ಕಾರಿ ಪ್ಯಾರಾ ಮೆಡಿಕಲ್ ಸೀಟು, ಹಾಸ್ಟೆಲ್, ಸ್ಕಾಲರ್ ಶಿಪ್ ಕೊಡಿಸುವುದಾಗಿ ಮನೊಜ್ ಪೌಲ್ ಎಂಬಾತ ಪ್ರತಿ ವಿದ್ಯಾರ್ಥಿಯಿಂದ ತಲಾ ಏಳು ಸಾವಿರ ರೂಪಾಯಿ ಪಡೆದಿದ್ದಾನೆ.
ಅದರೆ ಇದು ಯಾವುದನ್ನೂ ಮಾಡದೇ 150 ವಿದ್ಯಾರ್ಥಿಗಳಿಗೆ ಮೋಸ ಮಾಡಿ ಪರಾರಿಯಾಗಿದ್ದಾನೆ.
ಈತನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.